Advertisement

ಆಯುಷ್ಮಾನ್‌ ಆರೋಗ್ಯಚೀಟಿ ವಿತರಣೆ

04:57 PM Oct 21, 2019 | Team Udayavani |

ಮಂಡ್ಯ: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಸಂಸದೆ ಸುಮಲತಾ ಅವರ ಗೃಹಕಚೇರಿಯಲ್ಲಿ ಅರ್ಹ ಫ‌ಲಾನುಭವಿಗಳಿಗೆ ಆಯುಷ್ಮಾನ್‌ ಆರೋಗ್ಯ ಚೀಟಿ ವಿತರಣೆ ಮಾಡಲಾಯಿತು.

Advertisement

ಗುರುತಿನ ಚೀಟಿ ಉಚಿತ ವಿತರಣೆಗೆ ಪ್ರಧಾನಮಂತ್ರಿ ಜನಕಲ್ಯಾಣಾಧಿಕಾರಿ ಯೋಜನೆಗಳ ಅಭಿಯಾನದ ರಾಜ್ಯಾಧ್ಯಕ್ಷೆ ಡಾ. ರೂಪಾ ಅಯ್ಯರ್‌ ಚಾಲನೆ ನೀಡಿ ಮಾತನಾಡಿದರು. ಕೇಂದ್ರಸರ್ಕಾರದ ಜನಕಲ್ಯಾಣಯೋಜನೆಗಳನ್ನು ಸಂಸದೆ ಸುಮಲತಾ ಅವರ ನೇತೃತ್ವದಲ್ಲಿ ಫ‌ಲಾನುಭವಿ ಗಳಿಗೆ ಹಂತಹಂತವಾಗಿ ತಲುಪಿಸಲು ಮುಂದಾಗಿ ದ್ದೇವೆ, ನಾಗರೀಕರು ಮತ್ತು ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿ ಫ‌ಲಾನುಭವಿಗಳು ಸದುಪಯೋಗ ಪಡೆಯುವಂತೆ ತಿಳಿಸಿದರು.

ಆಯುಷ್ಮಾನ್‌ ಆರೋಗ್ಯಚೀಟಿಯ ಫ‌ಲಾನುಭವಿಗಳು ಆಕಸ್ಮಿಕವಾಗಿ ಅನಾರೋಗ್ಯಕ್ಕೆ, ಅಪಘಾತಕ್ಕೆ ಒಳಗಾದಾಗ ದುಬಾರಿ ಶುಲ್ಕ ಭರಿಸಲು ಪರದಾಡುವ ಸ್ಥಿತಿ ಬರುವುದಿಲ್ಲ. ದೂರದಲ್ಲಿ ದುಬಾರಿ ವೆಚ್ಚದ ಅನಾರೋಗ್ಯಕ್ಕೆ ಒಳಗಾದಾಗ ಚೀಟಿ ಉಪಯೋಗಕ್ಕೆ ಬರುತ್ತದೆ. ಎಲ್ಲರೂ ಫ‌ಲಾನುಭವಿಗಳಾಗಬಹುದು ಎಂದು ಸಲಹೆ ನೀಡಿದರು.

ಮಂಡ್ಯದಲ್ಲಿ ಅಂಬರೀಶ್‌ ಅಭಿಮಾನಿಗಳ ಸಂಘದ ಸಹಕಾರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಆಯುಷ್ಮಾನ್‌ ಆರೋಗ್ಯ ಚೀಟಿಗಳನ್ನು ನೀಡಲಾಗುತ್ತಿದೆ. ಜನರು ಇಂತಹ ಯೋಜನೆ ಗಳನ್ನು ಸದುಪ ಯೋಗಪಡಿಸಿಕೊಳ್ಳಲು ಮುಂದಾಗಬೇಕಿದೆ ಎಂದರು. ಇದೇ ವೇಳೆ ನೂರಾರು ಮಂದಿ ತಮ್ಮ ಆಧಾರ್‌ ಚೀಟಿಯೊಂದಿಗೆ ಆಗಮಿಸಿ, ಸಾಲಿನಲ್ಲಿ ನಿಂತು ಆಯುಷ್ಮಾನ್‌ ಆರೋಗ್ಯ ಚೀಟಿಗಾಗಿ ನೋಂದಣಿ ಮಾಡಿಸಿ, ಸ್ಥಳದಲ್ಲೇ ಪಡೆದುಕೊಂಡರು. ಅಂಬರೀಶ್‌ ಅಭಿಮಾನಿಗಳ ಸಂಘದವರಾದ ಬೇಲೂರು ಸೋಮಶೇಖರ್‌, ಬಸೀರ್‌ ಅಹಮದ್‌, ಪ್ರದೀಪ್‌ ಸಿದ್ದೇಗೌಡ, ಕಾರ್ತಿಕ್‌, ಹಿತೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next