ಮೈಸೂರು: ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿ ನಿಂತಿದ್ದ ಕಾರೊಂದರಲ್ಲಿ ಮಾಜಿ ಸೈನಿಕ ಶವಪತ್ತೆಯಾಗಿದೆ. ನಾಗಮಂಗಲ ತಾಲೂಕು ಬಿಂಡಿಗನವಿಲೆಯ ಮೂಲದ ಹಾಲಿ ಮೈಸೂರಿನ ಜಯ ನಗರದ ನಿವಾಸಿಯಾಗಿದ್ದ ರಾಜ್ ಕುಮಾರ್(40) ಮೃತರು. ಶನಿವಾರ ಈ ಘಟನೆ ನಡೆದಿದ್ದು, ಎರಡು ದಿನಗಳ ಬಳಿಕ ಸೋಮವಾರ ಶವ ಪತ್ತೆಯಾಗಿದೆ.
ಶನಿವಾರ ರಾತ್ರಿ ಮರುಳೇಶ್ವರ ಭವನದಲ್ಲಿ ಕಾರು ನಿಲ್ಲಿಸಿ, ಗ್ಲಾಸ್ ಸಂಪೂರ್ಣ ಬಂದ್ ಮಾಡಿ ಅಲ್ಲೇ ಮದ್ಯ ಸೇವನೆ ಮಾಡಿ, ನಿದ್ದೆಗೆ ಜಾರಿದ್ದಾರೆ. ಸಾಕಷ್ಟು ಸಮಯವಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು, ರಾಜ್ ಕುಮಾರ್ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ಮೊಬೈಲ್ ಸ್ವೀಚ್ ಆಫ್ ಆಗಿದೆ. ಎರಡು ದಿನಗಳ ಕಾಲ ಅವರನ್ನು ಹುಡುಕುವ ಪ್ರಯತ್ನ ಮಾಡಿದ ಕುಟುಂಬದವರು, ದೋಸೆ ಕಾರ್ನರ್ ಬಳಿ ಕಾರು ಪತ್ತೆ ಮಾಡಿದ್ದಾರೆ.
ಕಾರಿನ ಸೀಟಿನ ಕೆಳಗೆ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ನಕಲಿ ಕೀ ಮೂಲ ಕಾರಿನ ಡೋರ್ ತೆಗೆಸಿದಾಗ ರಾಜ್ ಕುಮಾರ್ ಕೆಳಗೆ ಬಿದ್ದಿದ್ದು, ಅವರು ಮೃತಪಟ್ಟಿರುವುದು ಗೊತ್ತಾಗಿದೆ.
ಇದನ್ನೂ ಓದಿ:- ಊಟದ ಕೌತುಕ
ಜತೆಯಲ್ಲಿ ಮದ್ಯದ ಬಾಟಲಿಗಳು ಇದ್ದುದ್ದರಿಂದ ಮದ್ಯ ಸೇವನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅತಿಯಾದ ಮದ್ಯ ಸೇವನೆ ಅಥವಾ ಕಾರು ಡೋರ್‌ನ ಗ್ಲಾಸ್ ಸಂಪೂರ್ಣ ಬಂದ್ ಆಗಿದ್ದರಿಂದ ಉಸಿರು ಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.