Advertisement
ಸದ್ಯ ಅಲ್ಪಸಂಖ್ಯಾತರು ಎಂದು ವ್ಯಾಖ್ಯಾನ ಮಾಡಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆಯಲ್ಲಿನ ಅಂಶದ ಬಗ್ಗೆಯೂ ಅವರು ತಕರಾರು ತೆಗೆದಿದ್ದಾರೆ. ಈ ನಿಟ್ಟಿನಲ್ಲಿ 1993 ಅ.23ರಂದು ಅಂದಿನ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಕಾನೂನು ಬಾಹಿರ ಎಂದು ವಾದಿಸಿದ್ದಾರೆ.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆಯ ಸೆಕ್ಷನ್ 2 ಸಿಯಲ್ಲಿ ಉಲ್ಲೇಖವಾಗಿರುವ ಅಂಶ ಸರಿಯಾಗಿಲ್ಲ ಮತ್ತು ಅದನ್ನು ರದ್ದುಗೊಳಿಸಬೇಕು. 2 ಸಿಯಲ್ಲಿ ಉಲ್ಲೇಖೀಸಿರುವಂತೆ ಕೇವಲ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಪಾರ್ಸಿಗಳನ್ನು ಮಾತ್ರ ದೇಶದಲ್ಲಿ ಅಲ್ಪಸಂಖ್ಯಾತರು ಎಂದು ಘೋಷಣೆ ಮಾಡಿರುವುದೂ ಸರಿಯಾಗಿಲ್ಲ. ಈ ಅಂಶ ಸಂವಿಧಾನದ 14, 15, 21, 29 ಮತ್ತು 30ನೇ ವಿಧಿಗಳ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.