ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಿ, “ಚೀನಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕೆಲವು ಕ್ರೀಡಾಪಟುಗಳಿಗೆ ಚೀನಾ ಸ್ಟೇಪಲ್ಡ್ ವೀಸಾ ವಿತರಿಸಿದೆ. ಈ ಕುರಿತು ಸಂಬಂಧಪಟ್ಟ ಚೀನಾ ಅಧಿಕಾರಿಗಳ ಎದುರು ಈಗಾಗಲೇ ಭಾರತ ತೀವ್ರ ಪ್ರತಿಭಟನೆ ದಾಖಲಿಸಿದೆ,” ಎಂದು ತಿಳಿಸಿದ್ದಾರೆ.
Advertisement
“ಭಾರತದ ಪ್ರಜೆಗಳಾಗಿರುವ ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಈ ರೀತಿ ಸ್ಟೇಪಲ್ಡ್ ವೀಸಾಗಳನ್ನು ವಿತರಿಸಲಾಗಿದೆ. ಇದನ್ನು ಒಪ್ಪಲಾಗುವುದಿಲ್ಲ. ಇಂತಹ ಕ್ರಮಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಭಾರತ ಹೊಂದಿದೆ. ಭಾರತದ ಪಾಸ್‌ಪೋರ್ಟ್ ಹೊಂದಿದವರಿಗೆ ವಾಸಸ್ಥಳ ಅಥವಾ ಜನಾಂಗೀಯ ಆಧಾರದಲ್ಲಿ ತಾರತಮ್ಯವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.