Advertisement

ಅಕ್ರಮ-ಸಕ್ರಮ ಹಕ್ಕುಪತ್ರ ವಿತರಣೆ

03:09 PM Jul 23, 2019 | Suhan S |

ಜಗಳೂರು: ಸೂರು ಇಲ್ಲದವರು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಯನ್ನು ಸರ್ಕಾರ ಸಕ್ರಮಗೊಳಿಸಿ ನಿಮಗೆ ಹಕ್ಕುಪತ್ರ ನೀಡಿದ್ದು, ಇದನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಗ್ರಾಮಸ್ಥರಿಗೆ ಸಲಹೆ ನೀಡಿದರು.

Advertisement

ಸೋಮವಾರ ತಾಲೂಕಿನ ಕಸ್ತೂರಿಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ 94 ಸಿ ವಿಧಿಯಡಿ ಸರಕಾರಿ ಜಮಿನಿನಲ್ಲಿ ಕಟ್ಟಡ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಸೂರು ಇಲ್ಲದವರು ಗೊಮಾಳ, ಸೇಂದಿವನ , ಸರಕಾರಿ ಜಮೀನುಗಳಲ್ಲಿ ಹಲವಾರು ವರ್ಷಗಳ ಹಿಂದೆ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು, ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸರಕಾರವೇ ಸೂರು ಸಕ್ರಮಗೊಳಿಸಿ ಹಕ್ಕುಪತ್ರ ನೀಡಿದೆ. ಸ್ವಂತ ಜಾಗವನ್ನು ಹೊಂದಬೇಕೆಂಬ ನಿಮ್ಮ ಕನಸನ್ನು ಸರಕಾರ ನನಸು ಮಾಡಿದ್ದು, ನೀವು ಜಾಗವನ್ನು ನಿಮ್ಮ ಸ್ವಂತ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳ ಬೇಕು ಎಂದು ಹೇಳಿದರು.

ಆರ್‌ ಐ ಗಳಾದ ಸಮೀರ್‌, ಧನಂಜಯ್‌, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ , ಪ್ರಕಾಶ್‌ ಸೇರಿದಂತೆ ಮತ್ತಿತರರು ಹಾಜರಿದ್ದರು. ಈ ವೇಳೆ 21 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಇಂದು ತಹಶೀಲ್ದಾರ್‌ರ ಜನ್ಮದಿನ ಎಂದರಿತ ಗ್ರಾಮಸ್ಥರು ಜನ್ಮದಿನವನ್ನು ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next