Advertisement
ಮೊದಲ ಎರಡು ಸ್ವರ್ಣ ಪದಕಗಳು ಮಿಶ್ರ ತಂಡ ವಿಭಾಗದಲ್ಲಿ ಒಲಿದವು. ಮೊದಲು 10 ಮೀ. ಏರ್ ರೈಫಲ್ ವಿಭಾಗದಲ್ಲಿ ಇಳವೆನಿಲ್ ವಲರಿವನ್-ದಿವ್ಯಾಂಶ್ ಪನ್ವಾರ್, ಬಳಿಕ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್-ಸೌರಭ್ ಚೌಧರಿ ಚಿನ್ನಕ್ಕೆ ಗುರಿ ಇರಿಸಿದರು.
Related Articles
Advertisement
ಇದಕ್ಕೂ ಮೊದಲು ಭಾರತದ ವನಿತಾ ಸ್ಕೀಟ್ ತಂಡ ಬೆಳ್ಳಿ ಜಯಿಸಿತ್ತು. ಪರ್ನಿನಾಜ್ ಧಾಲೀವಾಲ್, ಕಾರ್ತಿಕಿ ಶಕ್ತಾವತ್ ಮತ್ತು ಗಾನೆ ಮತ್ ಶೆಖೋನ್ ಈ ತಂಡದ ಸದಸ್ಯ ರಾಗಿದ್ದರು. ಇವರು ಕಜಾಕ್‌ಸ್ಥಾನ್ ವಿರುದ್ಧ 4-6 ಅಂತರದ ಹಿನ್ನಡೆ ಅನುಭವಿಸಿದರು.
ಮನು ಜೋಡಿಗೆ 5ನೇ ಚಿನ್ನ19 ವರ್ಷದ ಮನು ಭಾಕರ್ ಹಾಗೂ 18 ವರ್ಷದ ಸೌರಭ್ ಚೌಧರಿ ಇರಾನಿನ ಗೋಲೌ°ಶ್ ಸೆಬಾತೋಲ್ಲಾಹಿ-ಜಾವೇದ್ ಫರೂ ವಿರುದ್ಧ 16-12 ಅಂತರದ ಮೇಲುಗೈ ಸಾಧಿಸಿತು. ಇದು ಮನು-ಸೌರಭ್ ಜೋಡಿಗೆ ಒಲಿದ 5ನೇ ಬಂಗಾರ. ಇದೇ ಸ್ಪರ್ಧೆಯಲ್ಲಿ ಯಶಸ್ವಿನಿ ಸಿಂಗ್ ದೇಸ್ವಾಲ್-ಅಭಿಷೇಕ್ ವರ್ಮ 17-13 ಅಂತರದಿಂದ ಟರ್ಕಿಯ ಸೆವ್ವಲ್ ಇಲ್ಯಾದಾ ತರಾನ್-ಇಸ್ಮಾಯಿಲ್ ಕೆಲೆಸ್ ಅವರನ್ನು ಪರಾಭವಗೊಳಿಸಿ 3ನೇ ಸ್ಥಾನ ಪಡೆದರು. ಇದಕ್ಕೂ ಮೊದಲು ನಡೆದ 10 ಮೀ. ಏರ್ ರೈಫಲ್ ಮಿಶ್ರ ವಿಭಾಗದ ಸ್ಪರ್ಧೆಯಲ್ಲಿ 21 ವರ್ಷದ ಇಳವೆನಿಲ್-18 ವರ್ಷದ ದಿವ್ಯಾಂಶ್ ಪನ್ವಾರ್ ಸೇರಿಕೊಂಡು ಹಂಗೇರಿಯ ವಿಶ್ವದ ನಂ.1 ಖ್ಯಾತಿಯ ಇಸ್ತವಾನ್ ಪೆನಿ-ಎಸ್ತರ್ ಡೆನೆಸ್ ಜೋಡಿಯನ್ನು 16-10 ಅಂತರದಿಂದ ಪರಾಭವಗೊಳಿಸಿತು. ಸ್ಪರ್ಧೆಯಲ್ಲಿದ್ಧ ಭಾರತದ ಮತ್ತೂಂದು ಜೋಡಿ ಅಂಜುಮ್ ಮೌದ್ಗಿಲ್- ಅರ್ಜುನ್ ಬಬುಟ ಫೈನಲ್ ಏರಲು ವಿಫಲವಾಯಿತು.