Advertisement
ದಿವ್ಯಾಂಶ್ ಪನ್ವಾರ್ ಮತ್ತು ಅಂಜುಮ್ ಮೌದ್ಗಿಲ್ 10 ಮೀ. ಏರ್ ರೈಫಲ್ ಮಿಕ್ಸೆಡ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಅನಂತರ ಯುವ ಶೂಟರ್‌ಗಳಾದ ಮನು ಬಾಕರ್-ಸೌರಭ್ ಚೌಧರಿ ಜೋಡಿ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.
3 ಚಿನ್ನ, ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. 2 ಚಿನ್ನ, 2 ಬೆಳ್ಳಿ, ಒಂದು ಕಂಚು ಜಯಿಸಿರುವ ಚೀನ ದ್ವಿತೀಯ ಸ್ಥಾನಿಯಾಗಿದೆ. ಒಂದು ಚಿನ್ನ, 3 ಬೆಳ್ಳಿ, 3 ಕಂಚು ಗೆದ್ದಿರುವ ರಶ್ಯ 3ನೇ ಸ್ಥಾನ ಪಡೆದಿದೆ.
Related Articles
ಕೂಟದ ಕೊನೆಯ ದಿನವಾದ ರವಿವಾರ ಭಾರತಕ್ಕೆ ಯಾವುದೇ ಪದಕ ಒಲಿಯಲಿಲ್ಲ. ಒಲಿಂಪಿಕ್ ಕೋಟಾ ಕೂಡ ಸಿಗಲಿಲ್ಲ. ಭಾರತೀಯ ಶೂಟರ್‌ಗಳು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. ವನಿತೆಯರ 50 ಮೀ. ರೈಫಲ್ 3ಪಿ ಸ್ಪರ್ಧೆಯಲ್ಲಿ ಗಾಯತ್ರಿ, ಸುನಿಧಿ ಚೌಹಾಣ್ ಮತ್ತು ಕಾಜಲ್ ಸೈನಿ; 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್, ರಾಹಿ ಸನೊìಬತ್ ಮತ್ತು ಚಿಂಕಿ ಯಾದವ್ ಫೈನಲ್ ಪ್ರವೇಶಿಸುವಲ್ಲಿ ಎಡವಿದರು.
Advertisement