Advertisement
10 ಮೀ. ಏರ್ ಪಿಸ್ತೂಲ್ ವಿಭಾಗದ ಮಿಶ್ರ ಸ್ಪರ್ಧೆ, ಪುರುಷರ ಹಾಗೂ ವನಿತೆಯರ ತಂಡ ಸ್ಪರ್ಧೆಯ ಜತೆಗೆ ಪುರುಷರ 10 ಮೀ. ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಭಾರತ ಬಂಗಾರ ಜಯಿಸಿತು. ಇದರೊಂದಿಗೆ ಭಾರತ 6 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಂತಾಯಿತು. ಅಮೆರಿಕ ದ್ವಿತೀಯ ಸ್ಥಾನಕ್ಕೆ ಇಳಿಯಿತು. ಅದು 4 ಚಿನ್ನ, 4 ಬೆಳ್ಳಿ ಹಾಗೂ 2 ಕಂಚು ಜಯಿಸಿದೆ.
ರವಿವಾರ ಗೆದ್ದ ಭಾರತದ 4 ಚಿನ್ನಗಳಲ್ಲಿ ಎರಡು ಮನು ಭಾಕರ್ ಅವರಿಂದ ಒಲಿದು ಬಂತು. ಸರಬ್‌ಜೋತ್ ಸಿಂಗ್ ಅವರೊಂದಿಗೆ ಮಿಕ್ಸೆಡ್ ವಿಭಾಗದಲ್ಲಿ ಮೊದಲ ಚಿನ್ನ ಲಭಿಸಿತು. ಬಳಿಕ ರಿತಮ್ ಸಂಗ್ವಾನ್, ಶಿಖಾ ನರ್ವಾಲ್ ಜತೆಗೂಡಿ ವನಿತೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ವರ್ಣ ಸಾಧನೆಗೈದರು. ಈ ಸ್ಪರ್ಧೆಯಲ್ಲಿ ವನಿತಾ ತಂಡ ಬೆಲರೂಸ್ ವಿರುದ್ಧ 16-12 ಅಂತರದ ಮೇಲುಗೈ ಸಾಧಿಸಿತು. ಇದನ್ನೂ ಓದಿ:ವಿಶ್ವದ ನಂ.2 ಟೆನಿಸ್ ಆಟಗಾರ್ತಿ ಅರಿನಾ ಸಬಲೆಂಕಾಗೆ ಕೋವಿಡ್ ಪಾಸಿಟಿವ್
Related Articles
Advertisement
10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಆತ್ಮಿಕಾ ಗುಪ್ತಾ ರಾಜ್‌ಪ್ರೀತ್ ಸಿಂಗ್ ಜೋಡಿಗೆ ಬೆಳ್ಳಿ ಪದಕ ಒಲಿಯಿತು.