Advertisement

ಐತಿಹಾಸಿಕ ಹೆಜ್ಜೆಗಿಂದು ಮುನ್ನುಡಿ

03:30 AM Jul 22, 2019 | Sriram |

ಜಗತ್ತಿನ ಬಾಹ್ಯಾಕಾಶ ಅಧ್ಯಯನದಲ್ಲಿ ತನ್ನದೊಂದು ಛಾಪು ಮೂಡಿಸುವತ್ತ ಹೆಜ್ಜೆಯಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ)ಯ ಮಹತ್ವದ ಯೋಜನೆಯಾದ “ಚಂದ್ರಯಾನ-2′ ಸೋಮವಾರ ಅಪರಾಹ್ನ 2.43ಕ್ಕೆ ಉಡಾವಣೆಗೊಳ್ಳಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಉಡಾವಣ ಕೇಂದ್ರದಲ್ಲಿ ಉಡಾವಣೆಯ ಪೂರ್ವಸಿದ್ಧತೆಗಳು ಅಂತಿಮ ಘಟ್ಟ ತಲುಪಿದ್ದು, ರವಿವಾರ ಸಂಜೆ 6.43ರಿಂದ ಉಡಾವಣೆಯ ಕ್ಷಣಗಣನೆ ಶುರುವಾಗಿದೆ.

Advertisement

ಸೆ. 6 ಅಲ್ಲ… ಸೆ. 7
ಈ ಮೊದಲು, ಚಂದ್ರನ ಮೇಲೆ ವಿಕ್ರಮ್‌ (ಲ್ಯಾಂಡರ್‌) ಇಳಿಯುವುದು ಸೆ. 6 ಎಂದು ನಿರ್ಧರಿಸಲಾಗಿತ್ತು. ಈಗ ಉಡಾವಣೆ ನಿಗದಿತ ದಿನಕ್ಕಿಂತ ವಿಳಂಬವಾಗಿ ನಡೆಯುತ್ತಿರುವುದರಿಂದ ಸೆ. 6ರ ಬದಲು ಸೆ. 7ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನಲ್ಲಿ ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ.

ಸೇಲಂ ಬಂಡೆ, ದುರ್ಗದ ನೆಲ!
ಚಂದ್ರನ ಮೇಲ್ಮೆ„ ಮೇಲೆ ಇಳಿಯಲಿರುವ ರೋವರ್‌ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಇಸ್ರೋ, ಅಮೆರಿಕದ ಸುಪರ್ದಿಯಲ್ಲಿರುವ ಚಂದ್ರನ ನಿಜವಾದ ಮಣ್ಣನ್ನು ಕ್ವಿಂಟಾಲ್‌ಗ‌ಟ್ಟಲೆ ಭಾರತಕ್ಕೆ ತರಿಸಬೇಕಿತ್ತು. ಆದರೆ ಅದು ಬಲು ದುಬಾರಿಯಾಗಿದ್ದರಿಂದ ಅದನ್ನು ಕೈಬಿಟ್ಟ ಇಸ್ರೋ ವಿಜ್ಞಾನಿಗಳು ಸೇಲಂ ಬಳಿಯ ಸೀತಂಪೂಂಡಿ ಹಾಗೂ ಕುನ್ನಾಮಲೈನಲ್ಲಿನ ಕೆಲವು ಬಂಡೆಗಳ ಗುಣಲಕ್ಷಣಗಳು ಚಂದ್ರನ ಮೇಲಿನ ಮಣ್ಣಿನ ಗುಣಲಕ್ಷಣಗಳನ್ನು ಹೋಲುತ್ತವಾದ್ದರಿಂದ ಆ ಬಂಡೆಗಳನ್ನು ಪುಡಿ ಮಾಡಿ ಮಣ್ಣನ್ನಾಗಿಸಿ ಅದನ್ನು ಚಿತ್ರದುರ್ಗದ ಚಳ್ಳಕೆರೆಗೆ ಕೊಂಡೊಯ್ದು ಪರೀಕ್ಷೆ ನಡೆಸಿದ್ದಾರೆ.

ಚಂದ್ರನ ಮೇಲೆ ಮಾನವ: 50ನೇ ಸಂಭ್ರಮಾಚರಣೆ
ನಾಸಾ ಸರಣಿ ಕಾರ್ಯಕ್ರಮಗಳ ಮೊದಲ ಸಮಾರಂಭ ಆರ್ಮ್ಸ್ಟ್ರಾಂಗ್‌, ಅಲ್ಡಿ†ನ್‌, ಮೈಕಲ್‌ ಕೊಲೀನ್ಸ್‌ ಎಂಬ ಖಗೋಳ ಯಾನಿಗಳು ಚಂದ್ರನತ್ತ ಹೊರ ಟಿದ್ದ ಸ್ಥಳವಾದ ಕೇಪ್‌ ಕಾರ್ನ್ವೆಲ್‌ ಉಡಾವಣ ಕೇಂದ್ರದಲ್ಲಿ ರವಿವಾರ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌, ಅಪೋಲೊ 11ರಲ್ಲಿ ಚಂದ್ರನ ಮೇಲೆ ಮನುಷ್ಯನು ಇಳಿದಿದ್ದು, 30ನೇ ಶತಮಾನದಲ್ಲೂ ಪ್ರತಿಧ್ವನಿಸುವಷ್ಟು ವಿಶೇಷವಾದದ್ದು ಎಂದರು.

-ಭಾರತದ ಮಹತ್ವಾಕಾಂಕ್ಷಿ “ಚಂದ್ರಯಾನ-2′ ಯೋಜನೆ ಇಂದು ಅನುಷ್ಠಾನ
-ಶ್ರೀಹರಿಕೋಟಾದಿಂದ ನಭಕ್ಕೆ ಸಾಗಲಿರುವ ಚಂದ್ರನ ಅಧ್ಯಯನ ಪರಿಕರಗಳು
-ಚಂದ್ರನ ಮೇಲೆ ತನ್ನ ಪರಿಕರಗಳನ್ನು ಇಳಿಸಲಿರುವ ನಾಲ್ಕನೇ ರಾಷ್ಟ್ರವಾಗಿ ಭಾರತ
-ಉಡಾವಣೆ ಮುಂದೂಡಿದ್ದರಿಂದ ಸೆ. 6ರ ಬದಲಿಗೆ ಸೆ. 7ರಂದು ಚಂದ್ರನಲ್ಲಿ ಇಳಿಯಲಿರುವ ಲ್ಯಾಂಡರ್‌.

Advertisement

ಇಡೀ ವ್ಯವಸ್ಥೆ ದೋಷಮುಕ್ತವಾಗಿರುವುದು ಖಾತ್ರಿ ಯಾಗಿದೆ. ನಿರೀಕ್ಷೆಯಂತೆ ಯೋಜನೆ ಅನುಷ್ಠಾನಗೊಳ್ಳುವ ಆಶಾಭಾವನೆ ಇದೆ.
– ಕೆ. ಶಿವನ್‌, ಇಸ್ರೋ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next