Advertisement

ಇದೇ ತಿಂಗಳ ಅಂತ್ಯದಲ್ಲಿ ಪರ್ಯಾಯ ಉಪಗ್ರಹ ನಭಕ್ಕೆ

08:25 AM Aug 02, 2017 | Karthik A |

ಚೆನ್ನೈ: ಮಹತ್ವಾಕಾಂಕ್ಷಿ ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ನಿಮಿತ್ತ ಉಡ್ಡಯನ ಮಾಡಿದ್ದ ಐಆರ್‌ಎನ್‌ಎಸ್‌ಎಸ್‌-1 ಎ ಉಪಗ್ರಹ ತಾಂತ್ರಿಕ ಸಮಸ್ಯೆಗೆ ಈಡಾಗಿದ್ದರಿಂದ ಪರ್ಯಾಯ ಉಪಗ್ರಹವನ್ನು ನಭಕ್ಕೆ ಹಾರಿಬಿಡಲು ಇಸ್ರೋ ಉದ್ದೇಶಿಸಿದೆ. ಇದೇ ತಿಂಗಳ ಕೊನೆಗೆ ಉಪಗ್ರಹವನ್ನು ಪಿಎಸ್‌ಎಲ್‌ವಿ-ಸಿ-39 ರಾಕೆಟ್‌ ಮೂಲಕ ಉಡ್ಡಯನ ನಡೆಸಲು ನಿರ್ಧರಿಸಲಾಗಿದೆ. 

Advertisement

2013 ಜು.1ರಂದು ಹಾರಿಬಿಡಲಾಗಿದ್ದ ಉಪಗ್ರಹದಲ್ಲಿನ ಮೂರು ಪರಮಾಣು ಗಡಿಯಾರಗಳು ಇತ್ತೀಚೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಉಪಗ್ರಹವನ್ನು ಅದರ ಸ್ಥಾನಕ್ಕೆ ನೇಮಿಸಲು ಇಸ್ರೋ ಚಿಂತಿಸಿತ್ತು. ಹೊಸ ಉಪಗ್ರಹ ಉಡ್ಡಯನ ದಿನಾಂಕ ಶೀಘ್ರ ನಿಗದಿಯಾಗಲಿದೆ. ಸ್ವದೇಶಿ ದಿಕ್ಸೂಚಿ ವ್ಯವಸ್ಥೆ ಸ್ಥಾಪಿಸಲು ಒಟ್ಟು 7 ಉಪಗ್ರಹಗಳನ್ನು 1420 ಕೋಟಿ ರೂ. ವೆಚ್ಚದಲ್ಲಿ ಹಾರಿಬಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next