Advertisement

ಪ್ಲಾಸ್ಮಾ ಅಧ್ಯಯನಕ್ಕೆ ಇಸ್ರೋ ಹೆಜ್ಜೆ

01:20 AM Mar 14, 2021 | Team Udayavani |

ಶ್ರೀಹರಿಕೋಟಾ: ಭೂಮಂಡಲದಲ್ಲಿನ ವಿದ್ಯಮಾನ ಅಧ್ಯಯನಿಸುವ ಸಲುವಾಗಿ ಇಸ್ರೋ ಶುಕ್ರವಾರ ರಾತ್ರಿ ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಸಂಶೋಧನ ಕೇಂದ್ರದಿಂದ “ಆರ್‌ಎಚ್‌-560′ ಸಂಶೋಧನ ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾಯಿಸಿದೆ.
“ತಟಸ್ಥ ಗಾಳಿಯಲ್ಲಿ ನಿಯಾನ್‌ ಅನಿಲಗಳ ವರ್ತನೆ ವ್ಯತ್ಯಾಸಗಳು ಮತ್ತು ಪ್ಲಾಸ್ಮಾ ಡೈನಾಮಿಕ್ಸ್‌ನ ಅಧ್ಯಯನಕ್ಕಾಗಿ ಆರ್ಎಚ್‌-560 ಸೌಂಡಿಂಗ್‌ ರಾಕೆಟನ್ನು ಹಾರಿಬಿಡಲಾಗಿದೆ’ ಎಂದು ಇಸ್ರೋ ಟ್ವೀಟ್‌ನಲ್ಲಿ ಖಚಿತಪಡಿಸಿದೆ. ಅಲ್ಲದೆ ರಾಕೆಟ್‌ ಉಡಾವಣೆಯ ಚಿತ್ರಗಳನ್ನೂ ಸಂಸ್ಥೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

Advertisement

“ರೋಹಿಣಿ’ ಸರಣಿಯಲ್ಲಿ 1965ರಿಂದಲೇ ಸೌಂಡಿಂಗ್‌ ರಾಕೆಟ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಿರಿಮೆ ಇಸ್ರೋದ್ದು. “ಆರ್‌ಎಚ್‌-200′, “ಆರ್‌ಎಚ್‌-300 ಎಂಕೆ2′ ಬಳಿಕ ಈಗ “ಆರ್‌ಎಚ್‌-560ಎಂಕೆ2′ ಹಾರಿ ಬಿಡಲಾಗಿದೆ. 8-100 ಕಿಲೋ ಪೇಲೋಡ್‌ ಸಾಮರ್ಥ್ಯದ ಈ ರಾಕೆಟ್‌ಗಳು 80ರಿಂದ 475 ಕಿ.ಮೀ.ವರೆಗಿನ ಕಕ್ಷೆ ತಲುಪುವ ಸಾಮರ್ಥ್ಯ ಹೊಂದಿದೆ.

ಉದ್ದೇಶ: ಪ್ಲಾಸ್ಮಾ ಎಂಬುದು ವಾತಾವರಣದಲ್ಲಿ ಹೇರಳವಾಗಿರುವ ಅನಿಲ. ಪ್ಲಾಸ್ಮಾವು ಐಯೋನೈಸೇಷನ್‌ ಪ್ರಕ್ರಿಯೆಗೆ ಒಳಗಾದಾಗ ಆಕಾಶದಲ್ಲಿ ದೀರ್ಘ‌ ಕಾಲದ ವರೆಗಿನ ವಿದ್ಯುತ್ಕಾಂತೀಯ ಅಲೆಗಳು ಸೃಷ್ಟಿಯಾಗುತ್ತವೆ. ಭೂಮಿಯಿಂದ ಮೇಲೆ ಹೋದಂತೆಲ್ಲಾ ಪ್ಲಾಸ್ಮಾದ ವರ್ತನೆ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನೂ ಅರಿಯುವ ಉದ್ದೇಶವನ್ನು ಈ ಅಧ್ಯಯನ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next