ಡೆಹ್ರಾಡೂನ್: ಕಳೆದ ಕೆಲವು ದಿನಗಳಿಂದ ಕುಸಿತ ಕಾಣುತ್ತಿರುವ ಉತ್ತರಾಖಂಡದ ಜೋಶಿಮಠ ಮುಂದಿನ ದಿನಗಳಲ್ಲಿ ಸಂಪೂರ್ಣ ಮುಳುಗಡೆಯಾಗಬಹುದು. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವರದಿಯೊಂದು ತಿಳಿಸಿದ್ದು, ಆತಂಕ ಮೂಡಿಸಿದೆ.
ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ) ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಇದು ಇಡೀ ಪಟ್ಟಣವು ಮುಳುಗಬಹುದು ಎಂದು ತೋರಿಸುತ್ತದೆ. ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ.
ಜೋಶಿಮಠದಲ್ಲಿ ಮುಳುಗಡೆಯಾಗುತ್ತಿರುವ ಪ್ರದೇಶಗಳ ಚಿತ್ರಗಳನ್ನು ಹೈದರಬಾದ್ ಮೂಲದ ಎನ್‌ಆರ್‌ಎಸ್‌ಸಿ ಬಿಡುಗಡೆ ಮಾಡಿದೆ. ಇದರಲ್ಲಿ ಸೇನಾ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನವು ಸೇರಿದೆ.
ಇದನ್ನೂ ಓದಿ:ಟೀಂ ಹೋಟೆಲ್ ನಲ್ಲಿ ಅಸ್ವಸ್ಥರಾದ ರಾಹುಲ್ ದ್ರಾವಿಡ್: ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
Related Articles
ಇಸ್ರೋ ವರದಿಯನ್ನು ಆಧರಿಸಿ ಉತ್ತರಾಖಂಡ ಸರ್ಕಾರವು ತೆರವು ಕಾರ್ಯಾಚರಣೆ ಮಾಡುತ್ತಿದೆ. ಅಪಾಯದ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.
ವರದಿಯ ಪ್ರಕಾರ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು, ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಮುಳುಗಿದೆ. ಆದರೆ ಡಿಸೆಂಬರ್ 27, 2022 ಮತ್ತು 2023ರ ಜನವರಿ 8 ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿತ್ತು, ಈ 12 ದಿನಗಳಲ್ಲಿ ಪಟ್ಟಣವು 5.4 ಸೆಂ.ಮೀ. ರಷ್ಟು ಕುಸಿತ ಕಂಡಿದೆ. ಇದರಿಂದ ಅಪಾಯ ಸಂಭವಿಸಿದೆ.
ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ಕುಸಿಯಲಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತವೆ.