Advertisement

ಇಸ್ರೋ-ನಾಸಾ ಉಪಗ್ರಹ ಯೋಜನೆಗೆ ಸಿಕ್ಕೀತೇ ಒಪ್ಪಿಗೆ?

03:45 AM Jun 26, 2017 | Harsha Rao |

ವಾಷಿಂಗ್ಟನ್‌/ನ್ಯೂಯಾರ್ಕ್‌: ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಲು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಜ್ಜಾಗಿದ್ದಾರೆ. ರಾಜಕೀಯವಾಗಿ ಇದು ಪ್ರಾಮುಖ್ಯತೆ ಪಡೆದರೆ, ಎರಡೂ ದೇಶಗಳ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹಲವು ಬಾರಿ ಸಹಯೋಗ ಮಾಡಿಕೊಂಡಿವೆ. ಅದಕ್ಕೊಂದು ಉತ್ತಮ ಉದಾಹರಣೆ ಚಂದ್ರಯಾನದ ಮೊದಲ ಹಂತ.

Advertisement

ಇತ್ತೀಚಿನ ದಿನಗಳಲ್ಲಿ ಇಸ್ರೋ ವಾಣಿಜ್ಯಿಕವಾಗಿ ಯಶಸ್ಸು ಸಾಧಿಸುತ್ತಿರುವುದರಿಂದ ನಾಸಾ ಕೂಡ ನಮ್ಮ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಂಟಿ ಸಹಭಾಗಿತ್ವಕ್ಕೆ ಅಧಿಕೃತ ಒಪ್ಪಿಗೆ ಬಯಸಿದೆ. ಎರಡೂ ಸಂಸ್ಥೆಗಳು ಸೇರಿ ನಾಸಾ-ಇಸ್ರೋ ಸಿಂಥೆಟಿಕ್‌ ಅಪ ರ್ಚರ್‌ ರಾಡಾರ್‌ ಸ್ಯಾಟಲೈಟ್‌ (ನಿಸಾರ್‌- ಎನ್‌ಐಎಸ್‌ಎಆರ್‌) ಅಭಿವೃದ್ಧಿಪಡಿಸಲು ಮುಂದಾ ಗಿವೆ. 2021ಕ್ಕೆ ಅದನ್ನು ನಭಕ್ಕೆ  ಉಡಾಯಿಸಬೇಕೆಂದೂ ಅವು ಬಯ ಸಿವೆ. ಅಧಿಕೃತ ಒಪ್ಪಿಗೆ ಸಿಗುತ್ತದೆಯೋ, ಬಿಡುತ್ತದೆಯೋ ಗೊತ್ತಿಲ್ಲ, ಲಾಸ್‌ಏಂಜಲಿಸ್‌ನ ಪಸಡೆನ್ನಾದಲ್ಲಿ ಅದಕ್ಕೆ ಸಂಬಂಧಿಸಿದ ಕೆಲಸಗಳು ಈಗಾಗಲೇ ಶುರುವಾಗಿವೆ.

ಏನಿದರ ವಿಶೇಷ?: ಹವಾಮಾನಕ್ಕೆ ಸಂಬಂಧಿಸಿದಂತೆ ಉಂಟಾಗುವ ಏರಿಳಿತಗಳ ವಿಶೇಷ ಅಧ್ಯಯನಕ್ಕೆ ಸಿದ್ಧಪಡಿಸಲಾಗುತ್ತಿರುವ ಉಪಗ್ರಹವಿದು. ಅದಕ್ಕಾಗಿ 1.5 ಶತಕೋಟಿ ಡಾಲರ್‌ ವೆಚ್ಚವಾಗಲಿದೆ. ಕೃಷಿ ಮತ್ತು ಅರಣ್ಯ ಪ್ರದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆ ಅಧ್ಯಯನಕ್ಕೆ ಅದು ನೆರವಾಗಲಿದೆ. ಭೂಕಂಪ ಸೇರಿ ಪ್ರಾಕೃತಿಕ ವಿಕೋಪಗಳು ಯಾವ ಕಾರಣಕ್ಕಾಗಿ ಸಂಭವಿ ಸುತ್ತವೆ ಎಂಬುದರ ಅಧ್ಯಯನಕ್ಕೆ ಅದು ನೆರವಾಗಲಿದೆ ಎಂದು ಯೋಜನಾ ನಿರ್ದೇಶಕ ಪೌಲ್‌ ಎ ರೊಸೆನ್‌ ಹೇಳಿದ್ದಾರೆ. ವಾತಾ ವರಣದಲ್ಲಿನ  ಬದಲಾವಣೆಯಿಂದ ಹೇಗೆ ಸಮುದ್ರದ ಮಟ್ಟದಲ್ಲಿ ಏರಿಕೆಯಾಗುತ್ತಿದೆ, ಕಾಡ್ಗಿಚ್ಚುಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಬಗ್ಗೆಯೂ ಅಧ್ಯಯನ ನಡೆಸಬಹುದಾಗಿದೆ ಎಂದಿದ್ದಾರೆ ಅವರು. ಇತ್ತೀಚೆಗಷ್ಟೇ ಟ್ರಂಪ್‌ ಪ್ಯಾರಿಸ್‌ ಹವಾಮಾನ ಶೃಂಗದಿಂದ ಹೊರ ಬರುವ ಘೋಷಣೆ ಮಾಡಿದ್ದರು.

ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಅವಕಾಶ ಇಲ್ಲ: ಮೋದಿ ಮತ್ತು ಟ್ರಂಪ್‌ರ ಮಾತುಕತೆ ಬಳಿಕ ಸೋಮವಾರ ನಡೆಯಲಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಭಯ ನಾಯಕರ ಹೇಳಿಕೆ ಬಳಿಕ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಾಗಿಲ್ಲ. ಯಾವ ಕಾರಣಕ್ಕೆ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಅಣು ವಿಚಾರ ಪ್ರಧಾನ?: ಸೋಮವಾರದ ಮಾತುಕತೆ ಯಲ್ಲಿ ನಾಗರಿಕ ಪರಮಾಣು ವಿಚಾರ ಮುಖ್ಯವಾಗಿ ಪ್ರಸ್ತಾವವಾಗುವ ಸಾಧ್ಯತೆ ಇದೆ. ಭಾರತೀಯ ಉಷ್ಣ ವಿದ್ಯುತ್‌ ನಿಗಮ ಮತ್ತು ವಾಷಿಂಗ್ಟನ್‌ ಹೌಸ್‌ ನಡುವೆ ಈ ಬಗ್ಗೆ ಒಪ್ಪಂದವಾಗುವ ಸಾಧ್ಯತೆ ಇದೆ. ಅಮೆರಿಕ 6 ಪರಮಾಣು ಸ್ಥಾವರಗಳನ್ನು ಆಂಧ್ರದಲ್ಲಿ ನಿರ್ಮಿಸಲಿದೆ.

Advertisement

ಪ್ರಧಾನಿಗೆ ಅದ್ದೂರಿ ಸ್ವಾಗತ
ಪೋರ್ಚುಗಲ್‌ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ರವಿವಾರ ವಾಷಿಂಗ್ಟನ್‌ಗೆ ಆಗಮಿಸಿದರು. ಏರ್‌ಪೋರ್ಟ್‌ ಹೊರಗೆ ಮತ್ತು ಅವರು ತಂಗಿರುವ ಹೊಟೇಲ್‌ವುುಂಭಾ ಗದಲ್ಲಿ ಭಾರತ ಮೂಲದ ಸಾವಿರಾರು ಮಂದಿ ಹಾಜರಿದ್ದರು. ಹೊಟೇಲ್‌ ಸಮೀಪಕ್ಕೆ ಬರುತ್ತಿ ದ್ದಂತೆ ಹಲವಾರು ಮಂದಿ ಮೋದಿ, ಮೋದಿ ಎಂದು ಹರ್ಷೋದ್ಗಾರ ಮಾಡಿದರು. ಹೊಟೇಲ್‌ ಒಳಕ್ಕೆ ಪ್ರವೇಶಿಸುವ ಮುನ್ನ ಮೋದಿ ಭಾರತೀಯ ಮೂಲದವರಿಗೆ ಬಳಿಗೆ ತೆರಳಿ ಕೆಲವರ ಕೈ ಕುಲುಕಿದರು.

ಮೊದಲ ಭೇಟಿಗೆ ಉತ್ಸುಕನಾಗಿದ್ದೇನೆ
“ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಭೇಟಿಗೆ ಕಾತುರನಾಗಿದ್ದೇನೆ. ಅವರು ನನ್ನ ಉತ್ತಮ ಸ್ನೇಹಿತ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಶ್ವೇತ ಭವನದಲ್ಲಿ ಅವರ ಜತೆ ಮಾತನಾಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಉತ್ತರವಾಗಿ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ ಧನ್ಯವಾದ ವ್ಯಕ್ತಪಡಿಸಿ, ವೈಯಕ್ತಿಕ ಸ್ವಾಗತ ಕೋರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ತಾವೂ ಕೂಡ ಅದೇ ಭಾವನೆ ಹೊಂದಿದ್ದಾರೆಂದು ಮರು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next