ಬೆಂಗಳೂರು: ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಶನ್ ಕಾಂಪ್ಲೆಕ್ಸ್‌ನ (ಐಪಿಆರ್‌ಸಿ) ಅತ್ಯಂತ ಎತ್ತರದ ಪರೀಕ್ಷಾ ಘಟಕದಲ್ಲಿ ನಡೆಸಲಾದ ಸಿಇ-20 ಎಂಜಿನ್‌ನ ಫ್ಲೈಟ್ ಅಕ್ಸೆಪ್ಟೆನ್ಸ್ ಪರೀಕ್ಷೆ ಯಶಸ್ವಿಯಾ ಗಿದೆ. ಸುಮಾರು 25 ಸೆಕೆಂಡ್‌ಗಳ ಕಾಲ ಈ ಪರೀಕ್ಷೆ ನಡೆಸಲಾಗಿದೆ.
ಎಲ್‌ವಿಎಂ3-ಎಂ3 ಮಿಷನ್‌ಗಾಗಿ ಈ ಎಂಜಿನ್ ಅನ್ನು ಸಿದ್ಧಪಡಿಸಲಾಗಿದ್ದು, ಮುಂದಿನ 36 ಒನ್‌ವೆಬ್ ಇಂಡಿಯಾ -1 ಉಪಗ್ರಹಗಳ ಉಡಾವಣೆ ವೇಳೆ ಬಳಸಿಕೊಳ್ಳಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಇಸ್ರೋ ಮೂಲಗಳ ಪ್ರಕಾರ, ಲಂಡನ್ ಮೂಲದ ಒನ್‌ವೆಬ್ ಸ್ಯಾಟ್‌ಲೆçಟ್ ಕಮ್ಯೂನಿಕೇಶನ್ ಕಂಪೆನಿಯ ಉಪಗ್ರಹಗಳನ್ನು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‌ಎಸ್‌ಐಎಲ್) ಮುಖಾಂತರ ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಉಡಾವಣೆ ಮಾಡಲಾಗುತ್ತದೆ.
“ಎಲ್‌ವಿಎಂ 3 ವೆಹಿಕಲ್‌ನ (ಸಿ25 ಹಂತ) ಕ್ರಯೋಜೆನಿಕ್ ಮೇಲಿನ ಹಂತವು ಎಲ್‌ಒಎಕÕ…-ಎಲ್‌ಎಚ್ 2 ಪ್ರೊಪೆಲ್ಲಂಟ್‌ಗಳ ಸಂಯೋಜನೆಯೊಂ ದಿಗೆ ಕಾರ್ಯನಿರ್ವಹಿಸುವ ಸಿಇ -20 ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ ನಿರ್ವಾತದಲ್ಲಿ 186.36 ಕೆ.ಎನ್.ನಷ್ಟು ಸ್ವಲ್ಪಮಟ್ಟಿನ ಒತ್ತಡವನ್ನು ಅಭಿವೃದ್ಧಿಪಡಿಸುತ್ತದೆ”, ಎಂದು ಇಸ್ರೋ ಶನಿವಾರ ತಿಳಿಸಿದೆ.
ಇದರಿಂದ ಲಾಭವೇನು?: ಒನ್‌ವೆಬ್ ಮತ್ತು ಎನ್‌ಎಸ್‌ಐಎಲ್ ನಡುವೆ ಸಹ ಭಾಗಿತ್ವ ಒಪ್ಪಂದವಾಗಿದ್ದು, 2023ರ ವೇಳೆಗೆ ದೇಶದಲ್ಲಿ ಬ್ರಾಡ್‌ಬ್ಯಾಂಡ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸು ವುದು. ಹಾಗೆಯೇ, ಲಡಾಖ್‌ನಿಂದ ಕನ್ಯಾಕುಮಾರಿವರೆಗೆ ಹಾಗೂ ಗುಜ ರಾತ್‌ನಿಂದ ಅರುಣಾಚಲ ಪ್ರದೇಶದ ವರೆಗೆ, ಕೇವಲ ಕೈಗಾರಿಕೆಗಳು, ಕಂಪೆನಿ ಗಳಿಗಷ್ಟೇ ಅಲ್ಲದೇ, ನಗರಗಳು, ಗ್ರಾಮ ಗಳು, ಪಟ್ಟಣಗಳು ಮತ್ತು ಶಾಲೆಗಳಿಗೆ ಉತ್ತಮವಾದ ಅಂತರ್ಜಾಲ ವ್ಯವಸ್ಥೆ ಯನ್ನು ನೀಡುವುದಾಗಿದೆ.