Advertisement

ಮಾರುಕಟ್ಟೆಗೆ ಇಸ್ರೋ ಪ್ರವೇಶ

01:45 AM Jan 20, 2021 | Team Udayavani |

ಹೊಸದಿಲ್ಲಿ: ಅಮೆರಿಕದ ನಾಸಾದಂತೆ ಇಸ್ರೋ ಕೂಡ “ವಾಣಿಜ್ಯ ಸರಕು ಮಾರುಕಟ್ಟೆ’ಗೆ ಕಾಲಿಡಲು ಮಾಸ್ಟರ್‌ ಪ್ಲ್ರಾನ್‌ ರೂಪಿಸಿದೆ. ಅದರಂತೆ ಇಸ್ರೋ ಪರಿಕಲ್ಪನೆ- ಲೋಗೊ ಒಳಗೊಂಡ ಟಿ-ಶರ್ಟ್ಸ್, ಪೋಸ್ಟರ್‌, ಕಾಫಿ ಮಗ್‌, ಕೀ ಚೈನ್‌… ಇತ್ಯಾದಿಗಳನ್ನು ಮಾರಲು ನಿರ್ದಿಷ್ಟ ಸಂಸ್ಥೆಗಳಿಗೆ ಒಪ್ಪಿಗೆ ನೀಡಲಾಗಿದೆ.

Advertisement

“ವಿದ್ಯಾರ್ಥಿಗಳು, ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಇಸ್ರೋ ಸಾಧನೆ, ಸಂಶೋಧನೆ ಕುರಿತಾಗಿ ಜಾಗೃತಿ ಮೂಡಿಸಲು ಈ ಯೋಜನೆ ನೆರವಾಗಲಿವೆ. ಭಾರತಕ್ಕೆ ಇಸ್ರೋ ನೀಡಿದ ಕೊಡುಗೆಗಳೂ ಇದರಿಂದ ಜನರಿಗೆ ತಿಳಿಯಲಿದೆ’ ಎಂದು ಇಸ್ರೋ ತಿಳಿಸಿದೆ.

ಬ್ರ್ಯಾಂಡ್‌ ಶುಲ್ಕವಿಲ್ಲ: ಈಗಾಗಲೇ ಹಲವು ಏಜೆನ್ಸಿಗಳ ಜತೆ ಮಾತುಕತೆ ನಡೆಸಲಾಗಿದೆ. ಏಜೆನ್ಸಿಗಳು ಇಸ್ರೋ ಪರಿಕಲ್ಪನೆಯಲ್ಲಿ ಉತ್ಪನ್ನಗ ಳನ್ನು, ಕರಕುಶಲ ವಸ್ತುಗಳನ್ನು ತಯಾರಿಸಲು, ಮಾರಲು ಆಸಕ್ತಿ ತೋರಿವೆ. ಏಜೆನ್ಸಿಯ ಉತ್ಪನ್ನ ಗಳಿಗೆ ಇಸ್ರೋ ಯಾವುದೇ ರೀತಿಯ ಬ್ರ್ಯಾಂಡ್‌ ಶುಲ್ಕ ವಿಧಿಸುವುದಿಲ್ಲ. ಹೀಗಾಗಿ ಕೈಗೆಟಕುವ ದರದಲ್ಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ.

1 ಲಕ್ಷ ರೂ. ಠೇವಣಿ!: ಆಸಕ್ತ ಉತ್ಪಾದಕರು ಇಸ್ರೋ ವೆಬ್‌ಸೈಟ್‌ನಲ್ಲಿ ತಮ್ಮ ಸಂಸ್ಥೆಯ ಹೆಸರನ್ನುನೋಂದಾಯಿಸಿ ಕೊಳ್ಳಬೇಕಾಗುತ್ತದೆ. ಆಯ್ಕೆಯಾದ ಏಜೆನ್ಸಿಗಳು 1 ಲಕ್ಷ ರೂ. ಮರುಪಾವತಿಸದ ಠೇವಣಿ ಇಡಬೇಕಾಗುತ್ತದೆ. 2 ವರ್ಷಗಳ ಅವಧಿಗೆ ಇಸ್ರೋ ಮಾರುಕಟ್ಟೆ ಹಕ್ಕು ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next