ಕುಷ್ಟಗಿ: ನಿಡಶೇಸಿ ತೋಟಗಾರಿಕೆ ಇಲಾಖೆಯ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆ.ಎಸ್.ಎಚ್.ಡಿ.ಎ.) ಯಲ್ಲಿ ದಾಳಿಂಬೆ ಅರ್ಲಿ ಭಗವಾ ರೋಗ ನಿರೋಧಕ ತಳಿಯ ಸಸ್ಯಾಭಿವೃದ್ಧಿಯನ್ನು ಇಸ್ರೇಲ್ ತಂತ್ರಜ್ಞಾನ ಮಾದರಿಯಲ್ಲಿ ಬೆಳೆಸಲಾಗುತ್ತಿದೆ.
ತೋಟಗಾರಿಕೆ ಸಸ್ಯ ಕ್ಷೇತ್ರದಲ್ಲಿ 20 ಗುಂಟೆ ಪಾಲಿಹೌಸ್ ನಲ್ಲಿ ಇಸ್ರೇಲ್ ತಂತ್ರಜ್ಞಾನ ರೋಗ ಮುಕ್ತ ವಾತಾವರಣದಲ್ಲಿ
ಬೆಳೆಸಲಾಗುತ್ತಿದೆ. ಅರ್ಲಿ ಭಗವಾ ಹೆಸರಿನ ರೋಗ ನಿರೋಧಕ ತಳಿ 250 ಸಿಸಿ ಕಾಂಕ್ರೀಟ್ ರಿಂಗ್‌ಗಳಲ್ಲಿ ಫಲವತ್ತಾದ ಮಣ್ಣು, ಪೂರಕ ಲಘು ಪೋಷಕಾಂಶ ಮಿಶ್ರಣದೊಂದಿಗೆ ಈ ಸಸಿಗಳನ್ನು ನಾಟಿ ಮಾಡಲಾಗಿದೆ.
ಸಾಮಾನ್ಯವಾಗಿ ದಾಳಿಂಬೆ ಗಿಡಗಳ ಟೊಂಗೆ ಕತ್ತರಿಸಿ ಗೋಟಿ ಕಟ್ಟುವ ಮಾದರಿಯಲ್ಲಿ ಸಸ್ಯಾಭಿವೃದ್ಧಿಗೊಳಿಸಲಾಗುತ್ತಿತ್ತು.
ಈ ಇಸ್ರೇಲ್ ತಂತ್ರಜ್ಞಾನ ಮಾದರಿಯಲ್ಲಿ ವಿಭಿನ್ನವಾಗಿದ್ದು, ದಾಳಿಂಬೆ ಗಿಡ ಚಿಗುರೊಡೆದ ಕಡ್ಡಿಗಳಿಂದ ಗುಣಮಟ್ಟದ
ರೋಗ ರಹಿತವಾಗಿ ಸಸಿ ಬೆಳೆಸಲಾಗುತ್ತಿದೆ.
ಇದನ್ನೂ ಓದಿ:
ಅವ್ಯವಸ್ಥೆ ಮುಖ ಒಂದೊಂದಾಗಿ ಬೆಳಕಿಗೆ! ಚಿಕಿತ್ಸೆಗೆ ವೈದ್ಯಕೀಯ ಸಿಬ್ಬಂದಿ ತಾತ್ಸಾರ
ಈ ಕುರಿತು ತೋಟಗಾರಿಕೆ ಅಧಿಕಾರಿ ಆಂಜನೇಯ ದಾಸರ ಪ್ರತಿಕ್ರಿಯಿಸಿ, ಅರ್ಲಿ ಭಗವಾ ಸಸಿಗಳಿಗೆ ಬೇಡಿಕೆ ಇದ್ದು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾರ್ಗದರ್ಶನದಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತವಾಗಿ ತೀರ ಕಡಿಮೆ ಪ್ರದೇಶದಲ್ಲಿ ಹೆಚ್ಚು ಸಸಿಗಳನ್ನು ಬೇಡಿಕೆಗನುಗುಣವಾಗಿ ಪೂರೈಸಬಹುದಾಗಿದೆ. ಪಾಲಿಹೌಸ್‌ನಲ್ಲಿ ರೋಗ- ರುಜಿನು ಹರಡದಂತೆ ನಿರ್ಬಂಧಿತ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಬೆಳೆಸಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಪ್ರಯೋಜನ
ಪಡೆಯಬಹುದು.