Advertisement

ಭಾರತದ ಜತೆಗೆ ಉತ್ತಮ ಬಾಂಧವ್ಯಕ್ಕೆ ಆದ್ಯತೆ: ಇಸ್ರೇಲ್‌ ಪಿಎಂ

04:10 AM Jun 15, 2021 | Team Udayavani |

ಜೆರುಸಲೇಂ: ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಲು ಬಯಸುವುದಾಗಿ ಇಸ್ರೇಲ್‌ನ ನೂತನ ಪ್ರಧಾನಿ ನಫ್ತಾಲಿ ಬೆನ್ನೆಟ್‌ ಹೇಳಿದ್ದಾರೆ.

Advertisement

ಯಾಮಿನಾ ಪಾರ್ಟಿಯ ಮುಖ್ಯಸ್ಥರಾಗಿರುವ ಅವರು ರವಿವಾರ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ನೂತನ ಪ್ರಧಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಟ್ವೀಟ್‌ ಮಾಡಿ “ಇಸ್ರೇಲ್‌ ಪ್ರಧಾನಿಯಾಗಿ ಆಯ್ಕೆಯಾದ ನಫ್ತಾಲಿ ಬೆನ್ನೆಟ್‌ಗೆ ಅಭಿನಂದನೆಗಳು. ಮುಂದಿನ ವರ್ಷ ಭಾರತ ಮತ್ತು ಇಸ್ರೇಲ್‌ ನಡುವಿನ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾಗಿ 30 ವರ್ಷ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ನಿಮ್ಮ ಜತೆಗೆ ವ್ಯೂಹಾತ್ಮಕ ಮತ್ತು ಭಾಗೀದಾರಿಕೆ, 2 ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದಲು ಭಾರತ ಬಯಸುತ್ತದೆ ಎಂದು ಟ್ವೀಟ್‌ ಮಾಡಿದ್ದರು.

ಅದಕ್ಕೆ ಉತ್ತರವಾಗಿ ಟ್ವೀಟ್‌ ಮಾಡಿದ ಇಸ್ರೇಲ್‌ ಪಿಎಂ, ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದಲು ಬಯಸುವುದಾಗಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next