ಜೆರುಸಲೇಂ : ಲೆಬನಾನಿನ ಹೆಜ್ಬುಲ್ಲಾ ಸಂಘಟನೆಯೊಂದಿಗೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಕದನ ವಿರಾಮ ಒಪ್ಪಂದವನ್ನು “ತಾತ್ವಿಕವಾಗಿ” ಅನುಮೋದಿಸಿದ್ದಾರೆ. ಆದರೆ ಯಹೂದಿ ರಾಷ್ಟ್ರವು ಒಪ್ಪಂದದ ಕೆಲವು ವಿವರಗಳ ಮೇಲೆ ಮೀಸಲಾತಿಯನ್ನು ಹೊಂದಿದ್ದು, ಅದು ಇಂದು ಸೋಮವಾರ(ನ25) ಲೆಬನಾನ್‌ಗೆ ರವಾನೆಯಾಗುವ ನಿರೀಕ್ಷೆಯಿದೆ ಎಂದು ಸಿಎನ್‌ಎನ್ ಉಲ್ಲೇಖಿಸಿದ ಮೂಲವೊಂದು ತಿಳಿಸಿದೆ.
ಕೆಲವು ಪ್ರಮುಖ ಅಂಶಗಳನ್ನು ಇನ್ನೂ ಮಾತುಕತೆ ನಡೆಸಲಾಗುತ್ತಿದೆ ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರೆಗೆ ಒಪ್ಪಂದವನ್ನು ಅಂತಿಮವೆಂದು ಪರಿಗಣಿಸಲಾಗುವುದಿಲ್ಲ ಎಂದು ಹಲವು ಮೂಲಗಳು ತಿಳಿಸಿವೆ. ಕದನ ವಿರಾಮ ಒಪ್ಪಂದ ಅಂತಿಮವಾದ ನಂತರ ಇಸ್ರೇಲ್ ಕ್ಯಾಬಿನೆಟ್ ಕೂಡ ಅನುಮೋದಿಸಬೇಕಾಗಿದೆ.
“ನಾವು ಒಪ್ಪಂದದ ಕಡೆಗೆ ಸಾಗುತ್ತಿದ್ದೇವೆ, ಆದರೆ ಪರಿಹರಿಸಲು ಇನ್ನೂ ಕೆಲವು ಸಮಸ್ಯೆಗಳಿವೆ” ಎಂದು ಇಸ್ರೇಲ್ ಸರಕಾರದ ವಕ್ತಾರ ಡೇವಿಡ್ ಮೆನ್ಸರ್ ಹೆಚ್ಚಿನ ವಿವರ ನೀಡದೆ ,ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಕಳೆದ ವರ್ಷ ಅಕ್ಟೋಬರ್ 8 ರಂದು ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಸೇನೆ ಗಾಜಾಕ್ಕೆ ನುಗ್ಗಿದ ನಂತರ ಪ್ರಾರಂಭವಾದ ಗಡಿಯಾಚೆಗಿನ ದಾಳಿಗಳ ನಂತರ ಸೆಪ್ಟೆಂಬರ್ ಮಧ್ಯದಲ್ಲಿ ಲೆಬನಾನ್ ಮೇಲೆ ಭಾರಿ ಆಕ್ರಮಣವನ್ನು ಪ್ರಾರಂಭಿಸಿತ್ತು.
ಲೆಬನಾನಿನ ಶಿಯಾ ಇಸ್ಲಾಮಿಸ್ಟ್ ರಾಜಕೀಯ ಪಕ್ಷ ಮತ್ತು ಅರೆಸೈನಿಕ ಗುಂಪು ಹೆಜ್ಬುಲ್ಲಾ ಇಸ್ರೇಲ್ ನೊಂದಿಗೆ ಸಮರ ನಿರತವಾಗಿತ್ತು.