Advertisement
ಮೊಸ್ಸಾದ್ ಕೈಚಳಕ!
Related Articles
Advertisement
ಮೊಬೈಲ್ ಫೋನ್ ಬಳಕೆಯಿಂದ ದೂರ ಇರಲು ಹೇಳಿದ್ದ ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆ ಸಂವಹನಕ್ಕಾಗಿ ವಯರ್ ಲೆಸ್ ಪೇಜರ್ಸ್ ಗಳನ್ನು ಸಂಘಟನೆಯ ಸಾವಿರಾರು ಉಗ್ರರು ಬಳಕೆ ಮಾಡುತ್ತಿದ್ದರು ಎಂದು ವರದಿ ವಿವರಿಸಿದೆ.
ಹೀಗೆ ಲೆಬನಾನ್ ಮತ್ತು ಸಿರಿಯಾದಲ್ಲಿ ಉಗ್ರರು ಬಳಕೆ ಮಾಡುತ್ತಿದ್ದ ಪೇಜರ್ಸ್ ಗಳು ಏಕಕಾಲಕ್ಕೆ ಸ್ಫೋಟಗೊಂಡಿವೆ. ಸಿರಿಯಾದಲ್ಲಿ ಸುಮಾರು ನೂರು ಸ್ಫೋಟ ಪ್ರಕರಣಗಳು ವರದಿಯಾಗಿದೆ.
ಸಾವಿರಾರು ಪೇಜರ್ಸ್ ಗಳಿಗೆ ಏಕಕಾಲಕ್ಕೆ ಕೋಡೆಡ್ (Coded) ಸಂದೇಶಗಳನ್ನು ರವಾನಿಸಿದ್ದು, ಅದನ್ನು ಸ್ವೀಕರಿಸಿದ ಉಗ್ರರು ಪೇಜರ್ ಬಟನ್ ಒತ್ತಿದಾಗ ಸ್ಫೋಟ ಸಂಭವಿಸಿರುವುದಾಗಿ ಲೆಬನಾನ್ ನ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ರಾಯಿಟರ್ಸ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಛಿದ್ರಗೊಂಡ ಪೇಜರ್ಸ್ ಚಿತ್ರಗಳಲ್ಲಿ ಗೋಲ್ಡ್ ಅಪೋಲೋ ಕಂಪನಿ ಲಿಮಿಟೆಡ್ ಇದನ್ನು ತಯಾರಿಸಿರುವ ಸ್ಟಿಕ್ಕರ್ಸ್ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಸ್ಕೈ ನ್ಯೂಸ್ ಅರೇಬಿಯಾ ವರದಿ ಪ್ರಕಾರ, ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸ್ಸಾದ್, ಪೇಜರ್ಸ್ ಒಳಗೆ PETN ಸ್ಫೋಟಕವನ್ನು ಸಣ್ಣ ಪ್ರಮಾಣದಲ್ಲಿ ಅಳವಡಿಸಲಾಗಿತ್ತು. ಇದು ಭಾರೀ ದುರಂತದ ಸ್ಫೋಟಕವಾಗಿದೆ. ಪೇಜರ್ಸ್ ನ ಬ್ಯಾಟರಿಯ ಟೆಂಪರೇಚರ್ ಅನ್ನು ಇದು ಹೆಚ್ಚಳ ಮಾಡುವ ಮೂಲಕ ಸ್ಫೋಟಗೊಳ್ಳಲಿದೆ ಎಂದು ವಿವರಿಸಿದೆ.