Advertisement
ಹಮಾಸ್ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ಮುಂದುವರೆಸಿದ್ದು ಹಮಾಸ್ ಭಯೋತ್ಪಾದಕರ ಅಡಗು ತಾಣಗಳನ್ನು ಹೊಡೆದುರುಳಿಸುವ ಕಾರ್ಯಕ್ಕೆ ಮುಂದಾಗಿದೆ, ಹಾಗಾಗಿ ದಿನದಿಂದ ದಿನಕ್ಕೆ ಇಸ್ರೇಲ್ ಸೇನೆ ತನ್ನ ಕಾರ್ಯ ಚಟುವಟಿಕೆಯನ್ನು ಮುಂದುವರೆಸುತ್ತಲೇ ಇದೆ. ಗುರುವಾರ ಇಸ್ರೇಲ್ ಸೇನೆ ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ನಗರವನ್ನು ಸುತ್ತುವರೆದಿದ್ದು ದಾಳಿಯನ್ನು ಮುಂದುವರೆಸುವ ಸೂಚನೆಯನ್ನು ನೀಡಿದೆ. ಇದರಿಂದ ಸದ್ಯಕ್ಕೆ ಇಸ್ರೇಲ್ ಹಮಾಸ್ ಭಯೋತ್ಪಾದಕರನ್ನು ಮಟ್ಟ ಹಾಕುವ ವರೆಗೆ ವಿರಮಿಸುವುದಿಲ್ಲ ಎಂಬ ಸಂದೇಶ ಸಾರಿದಂತಾಗಿದೆ.
Related Articles
Advertisement
ಈ ಹಿಂದೆ ಕದನ ವಿರಾಮವನ್ನು ತಳ್ಳಿಹಾಕಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ನಾವು ಮುನ್ನಡೆಯುತ್ತಿದ್ದೇವೆ… ನಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಹಮಾಸ್ ಆಡಳಿತವನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ.
ಉತ್ತರ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರಿದಂತೆ, ಗಾಯಗೊಂಡಿದ್ದ ನೂರಾರು ವಿದೇಶಿಯರು ಮತ್ತು ಸ್ಥಳೀಯ ಪ್ರಜೆಗಳು ರಫಾ ಬಾರ್ಡರ್ ಕ್ರಾಸಿಂಗ್ ಮೂಲಕ ಈಜಿಪ್ಟ್ ಪ್ರವೇಶಿಸಿದ್ದಾರೆ. ಅಲ್ಲದೆ ಗಾಯಗೊಂಡ 21 ಪ್ಯಾಲೆಸ್ತೀನಿಯರು ಮತ್ತು 72 ಮಕ್ಕಳು ಸೇರಿದಂತೆ 344 ವಿದೇಶಿ ಪ್ರಜೆಗಳು ಬುಧವಾರವಷ್ಟೇ ರಫಾ ಗಡಿಯನ್ನು ದಾಟಿದ್ದಾರೆ ಎಂದು ಈಜಿಪ್ಟ್‌ನ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.
ಇದನ್ನೂ ಓದಿ: Indian-Origin Israeli Soldier: ಗಾಜಾ ಸಂಘರ್ಷ… ಭಾರತ ಮೂಲದ ಇಸ್ರೇಲ್ ಯೋಧ ಮೃತ್ಯು