Advertisement

ವೆಸ್ಟ್ ಬ್ಯಾಂಕ್ ಸಂಘರ್ಷ: ಪ್ಯಾಲೆಸ್ತೀನ್ ನಲ್ಲಿ 11 ಜನರ ಹತ್ಯೆಗೈದ ಇಸ್ರೇಲ್ ಪಡೆಗಳು

09:27 AM Feb 23, 2023 | Team Udayavani |

ನಬ್ಲಸ್: ಇಸ್ರೇಲಿ ಪಡೆಗಳು ಬುಧವಾರ ಆಕ್ರಮಿತ ವೆಸ್ಟ್ ಬ್ಯಾಂಕ್‌ ಫ್ಲ್ಯಾಷ್‌ಪಾಯಿಂಟ್ ಸಿಟಿ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಬಂದೂಕುಧಾರಿಗಳು ಮತ್ತು ನಾಲ್ವರು ನಾಗರಿಕರು ಸೇರಿದಂತೆ 11 ಪ್ಯಾಲೆಸ್ತೀನಿಯನ್ನರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

Advertisement

ಘಟನೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ಉಗ್ರಗಾಮಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಅವರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಗುಂಡು ಹಾರಿಸಲಾಗಿದೆ. ನಬ್ಲಸ್ ನಗರದಲ್ಲಿ ಕಾರ್ಯಾಚರಣೆಯಲ್ಲಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ವಲಯ ಮಾಹಿತಿ ನೀಡಿದೆ. ಇಸ್ರೇಲಿ ಸೇನೆಯಲ್ಲಿ ಯಾರಿಗೂ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ತನ್ನ ಇಬ್ಬರು ನಬ್ಲಸ್ ಕಮಾಂಡರ್‌ ಗಳನ್ನು ಇಸ್ರೇಲಿ ಪಡೆಗಳು ಮನೆಯೊಂದರಲ್ಲಿ ಸುತ್ತುವರೆದಿದ್ದವು ಎಂದು ಪ್ಯಾಲೇಸ್ತೀನಿಯನ್ ಉಗ್ರಗಾಮಿ ಬಣ ಇಸ್ಲಾಮಿಕ್ ಜಿಹಾದ್ ಹೇಳಿದರು. ಇದರಿಂದ ಗುಂಡಿನ ದಾಳಿ ನಡೆಸಲಾಯಿತು, ಸ್ಫೋಟಗಳು ಸದ್ದು ಮಾಡಿದವು. ಅಲ್ಲದೆ ಸ್ಥಳೀಯ ಯುವಕರು ಶಸ್ತ್ರಸಜ್ಜಿತ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಕೋವಿಡ್‌ ಭೀತಿ: 3 ವರ್ಷ ಮಗನೊಂದಿಗೆ ಮನೆಯೊಳಗೆಯೇ ಸ್ವಯಂ ದಿಗ್ಭಂಧನವಾಗಿದ್ದ ತಾಯಿ.!

Advertisement

ಇಬ್ಬರು ಇಸ್ಲಾಮಿಕ್ ಜಿಹಾದ್ ಕಮಾಂಡರ್ ಮತ್ತು ಇನ್ನೊಬ್ಬ ಗನ್ ಮ್ಯಾನ್ ಮೃತಪಟ್ಟಿದ್ದಾನೆ ಎಂದು ಪ್ಯಾಲೆಸ್ತೀನಿ ಮೂಲಗಳು ತಿಳಿಸಿದೆ. ಅಲ್ಲದೆ ನಾಲ್ಕು ಮಂದಿ ನಾಗರಿಕರೂ ಅಸುನೀಗಿದ್ದಾರೆ. ಅವರಲ್ಲಿ 72 ವರ್ಷದ ವೃದ್ಧ ಮತ್ತು 14 ವರ್ಷದ ಬಾಲಕನೂ ಸೇರಿದ್ದಾನೆ. ದಾಳಿಯ ಸಮಯದಲ್ಲಿ ಗ್ಯಾಸ್ ಇನ್ಹಲೇಷನ್‌ ನಿಂದ ಬಳಲುತ್ತಿದ್ದ 66 ವರ್ಷದ ವ್ಯಕ್ತಿಯೊಬ್ಬರು ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ. 100ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next