Advertisement

Israel-Hamas ಕದನ ವಿರಾಮಕ್ಕೆ ಒಪ್ಪದ ಇಸ್ರೇಲ್‌ ಪ್ರಧಾನಿ : ಅಣು ಬಾಂಬ್‌ ಬೆದರಿಕೆ!

12:25 AM Nov 06, 2023 | Team Udayavani |

ಖಾನ್‌ ಯೂನಿಸ್‌: ಗಾಜಾದಲ್ಲಿ ನಿರಂ ತರ ವೈಮಾನಿಕ ದಾಳಿಯಿಂದ ನೊಂದಿ ರುವ ನಾಗರಿಕರಿಗೆ ನೆರವು ಕಲ್ಪಿಸುವ ಸಲುವಾಗಿಯಾದರೂ ತಾತ್ಕಾಲಿಕ ಕದನ ವಿರಾಮ ಘೋಷಿಸುವಂತೆ ಅಮೆರಿಕ ಮಾಡುತ್ತಿರುವ ಮನವಿಗೂ ಇಸ್ರೇಲ್‌ ಬಗ್ಗುತ್ತಿಲ್ಲ. ಶನಿವಾರ ರಾತ್ರಿ ಮತ್ತೆ ಇಸ್ರೇಲ್‌ ಯುದ್ಧ ವಿಮಾನಗಳು ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ್ದು, 40 ಮಂದಿ ಅಸುನೀ ಗಿದ್ದಾರೆ. ನೂರಾರು ಮಂದಿ ಗಾಯ ಗೊಂಡಿದ್ದಾರೆ.

Advertisement

ಗಾಜಾದಲ್ಲಿ ಹೆಚ್ಚುತ್ತಿರುವ ನಾಗರಿಕರ ಸಾವು-ನೋವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಮೆರಿಕದ ವಾಷಿಂಗ್ಟನ್‌ನಿಂದ ಬರ್ಲಿನ್‌ವರೆಗೆ ಸಾವಿರಾರು ಮಂದಿ ರವಿವಾರ ಬೀದಿಗಿಳಿದು ಕದನ ವಿರಾ ಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕದನ ವಿರಾಮ ಘೋಷಿಸುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಪಟ್ಟು ಹಿಡಿದಿದ್ದಾರೆ.

ಕೆರಳಿದ ಅರಬ್‌ ಜಗತ್ತು: ಈ ಮಧ್ಯೆ, ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರು ಮಧ್ಯಪ್ರಾಚ್ಯ ಪ್ರವಾಸ ಆರಂಭಿಸಿದ್ದಾರೆ. ಅವರಿಗೂ ಅರಬ್‌ ರಾಷ್ಟ್ರಗಳ ಆಕ್ರೋಶದ ಬಿಸಿ ತಟ್ಟಿದೆ. ಗಾಜಾದಲ್ಲಿ ನಾಗರಿಕರ ಮಾರಣ ಹೋಮ ತಪ್ಪಿಸುವಲ್ಲಿ ವಿಫ‌ಲವಾಗಿರುವ ಅಮೆರಿಕದ ವಿರುದ್ಧ ಅರಬ್‌ ರಾಷ್ಟ್ರಗಳು ಕೆಂಡವಾಗಿವೆ. ಇದೇ ವೇಳೆ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು ಗಾಜಾ ನಾಗರಿಕರೇ ಹುಡುಕಿ ಕೊಲ್ಲಲಿ, ಆಗ ಯುದ್ಧದ ಅವಧಿ ಕಡಿತಗೊಳ್ಳಲಿದೆ ಎಂದು ಇಸ್ರೇಲ್‌ ಹೇಳಿದೆ.

ಅಣು ಬಾಂಬ್‌ ಬೆದರಿಕೆ!: ಇಸ್ರೇಲ್‌ನ ಸಚಿವರೊಬ್ಬರು ರವಿವಾರ, “ಗಾಜಾದ ಮೇಲೆ ಅಣು ಬಾಂಬ್‌ ಹಾಕುವ ಆಯ್ಕೆ ಯೂ ನಮ್ಮ ಮುಂದಿದೆ’ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ, ಆ ಸಚಿವರನ್ನು ಅಮಾನತು ಮಾಡಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next