Advertisement

Al-Aqsa Mosque; ರಮದಾನ್‌ ನಡುವೆ ಜೆರುಸಲೇಮ್‌ನಲ್ಲಿ ಮತ್ತೆ ಹಿಂಸಾಚಾರ

08:12 PM Apr 05, 2023 | Team Udayavani |

ಜೆರುಸಲೇಮ್‌: ಇಸ್ರೇಲ್‌ ರಾಜಧಾನಿ ಜೆರುಸಲೇಮ್‌ನಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ. ತಮ್ಮ ಮೇಲೆ ಪಟಾಕಿಗಳನ್ನು ಹಾರಿಸಿದ ಪ್ಯಾಲೆಸ್ತೀನಿ ಯುವಕರ ಮೇಲೆ ಇಸ್ರೇಲಿ ಸೈನಿಕರು ಗ್ರೆನೇಡ್‌ ದಾಳಿ ನಡೆಸಿದ್ದಾರೆ.

Advertisement

ಇದು ಒಮ್ಮೆಲೇ ಪರಿಸ್ಥಿತಿಯನ್ನು ವಿಕೋಪಕ್ಕೆ ತಲುಪಿಸಿದೆ.ಬುಧವಾರ ಮುಂಜಾನೆಯಷ್ಟೊತ್ತಿಗೆ, ಇಸ್ಲಾಮಿನ ಮೂರನೇ ಅತಿ ಪವಿತ್ರ ಸ್ಥಳವೆನಿಸಿಕೊಂಡಿರುವ ಮಸೀದಿಗೆ ನುಗ್ಗಿದ ಇಸ್ರೇಲಿ ಸೈನಿಕರು ಗ್ರೆನೇಡ್‌ ದಾಳಿ ಮಾಡಿದರು. ಇದಕ್ಕೆ ಪ್ರತಿಯಾಗಿ ದ.ಇಸ್ರೇಲ್‌ ಮೇಲೆ ಪ್ಯಾಲೆಸ್ತೀನಿ ಉಗ್ರರು ರಾಕೆಟ್‌ ದಾಳಿ ನಡೆಸಿದರು.

ಒಟ್ಟಾರೆಯಾಗಿ ಹಬ್ಬದ ವಾತಾವರಣ ಕದಡಿಹೋಗಿ, ಜನರೆಲ್ಲ ನೋವಿನಲ್ಲಿ ಮುಳುಗಿದರು. ಪ್ರಸ್ತುತ ಮುಸ್ಲಿಮರು ಅಲ್‌ ಅಕ್ಸಾ ದಲ್ಲಿ ತಿಂಗಳ ಕಾಲದ ರಮ್ಜಾನ್‌ ಹಬ್ಬದಾಚರಣೆ ಶುರು ಮಾಡಿದ್ದಾರೆ. ಇನ್ನೊಂದು ಕಡೆ ಬುಧವಾರ ಸಂಜೆಯಿಂದಲೇ ಯಹೂದಿಗಳು 7 ದಿನಗಳ ಪಾಸೋವರ್‌ ಹಬ್ಬ ಆರಂಭಿಸಿದ್ದಾರೆ. ಎರಡೂ ಸಮುದಾಯಗಳಿಗೂ ಅಲ್‌ ಅಖಾÕ ಅತ್ಯಂತ ಪವಿತ್ರವಾದದ್ದು.

Advertisement

Udayavani is now on Telegram. Click here to join our channel and stay updated with the latest news.

Next