Advertisement

ಇಸ್ರೇಲ್‌ ಪಿಎಂಗೆ ಮೈಸೂರು ಸೈನಿಕರ ಕಂಚಿನ ಪ್ರತಿಮೆ ಗಿಫ್ಟ್?

11:42 AM Jan 14, 2018 | |

ನವದೆಹಲಿ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜ.14ರಿಂದ 17ರ ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮೈಸೂರು, ಹೈದರಾಬಾದ್‌ ಮತ್ತು ಜೋಧ್‌ಪುರದ ಅಶ್ವಾರೋಹಿ ಪಡೆಯ ಮೂರು ಕಂಚಿನ ಪ್ರತಿಮೆಗಳನ್ನು ಸ್ಮರಣಿಕೆಯನ್ನಾಗಿ ನೀಡಲಾಗುತ್ತದೆ.

Advertisement

ಈ ಮೂರು ಪಡೆಗಳು 1918ರ ಸೆ.23ರಂದು ಮೊದಲ ವಿಶ್ವ ಮಹಾಯುದ್ಧದ ಕೊನೆಯ ಸಂದರ್ಭದಲ್ಲಿ ಸೈನಿ ಮತ್ತು ಪ್ಯಾಲೆಸ್ತೀನ್‌ ಪರ ನಡೆದ ಹೋರಾಟದಲ್ಲಿ ಹೈಫಾ ನಗರವನ್ನು ಒಟ್ಟಮನ್ಸ್‌ ಪಡೆಯಿಂದ ವಶಪಡಿಸುವಲ್ಲಿ ಯಶಸ್ವಿಯಾಗಿದ್ದವು. ಈ ಕಾಳಗದಲ್ಲಿ 44 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.

“ಹೈಫಾ ದಿನಾಚರಣೆ’ಯನ್ನು ಇದುವರೆಗೆ ಪ್ರತಿವರ್ಷ ಸೆ.23ರಂದು ಆಚರಿಸಲಾಗುತ್ತದೆ. ಗಮನಾರ್ಹ ಅಂಶವೆಂದರೆ 2003ರಲ್ಲಿ ಇಸ್ರೇಲ್‌ನ ಪ್ರಧಾನಿಯಾಗಿದ್ದ ಏರಿಯಲ್‌ ಶೆರೋನ್‌ ಭಾರತಕ್ಕೆ ಭೇಟಿ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಹಾಲಿ ಪಿಎಂ ಬೆಂಜಮಿನ್‌ ನೆತನ್ಯಾಹು 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಭಾರತ ಮತ್ತು ಇಸ್ರೇಲ್‌ ಪಿಎಂಗಳ ಮೊದಲ ಭೇಟಿ ನವದೆಹಲಿಯ ತೀನ್‌ಮೂರ್ತಿ ಭವನದಲ್ಲಿ ನಡೆಯಲಿದೆ. 17ರಂದು ಗುಜರಾತ್‌ ಪ್ರವಾಸದ ವೇಳೆ ಅಹಮದಾಬಾದ್‌ ಏರ್‌ಪೋರ್ಟ್‌ನಿಂದ ಸಾಬರಮತಿ ಆಶ್ರಮದ ವರೆಗೆ 8 ಕಿಮೀ ರೋಡ್‌ ಶೋ ನಡೆಸಲಿದ್ದಾರೆ. ಈ ಹಿಂದೆ ಜಪಾನ್‌ ಪ್ರಧಾನಿ ಶಿಂಜೋ ಅಬೆ ಪ್ರವಾಸ ಕೈಗೊಂಡಿದ್ದ ವೇಳೆ ಇದೇ ಮಾದರಿ ರೋಡ್‌ ಶೋ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next