Advertisement
ಸ್ಪೈ ಪ್ಲೇನ್‌ಗಳು, ಕ್ಷಿಪಣಿಗಳು ಹಾಗೂ ರಾಡಾರ್ ಸಿಸ್ಟಂ ಸೇರಿ ಹಲವು ರಕ್ಷಣಾ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ಇಸ್ರೇಲ್ ಬಯ ಸಿದ್ದು, ಈ ಎಲ್ಲ ಉಪಕರಣಗಳ ವಿವರ ಉಳ್ಳ ಮಾಹಿತಿಯನ್ನು ನಿಯೋಗದ ಅಧಿಕಾರಿಯೊಬ್ಬರು ಮುದ್ರಿಸಿದ್ದರು. ಆದರೆ ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಜೆರುಸಲೇಂನ ಹೊಟೇಲ್‌ನಲ್ಲಿ ಉಪಾಹಾರ ಸೇವಿಸಿದ್ದ ಅಧಿಕಾರಿಗಳು ಈ ದಾಖಲೆಯನ್ನು ಅಲ್ಲೇ ಬಿಟ್ಟು ಹೊರಟಿದ್ದರು. ಅನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಪರಿಚಾರಕನ ಸ್ನೇಹಿತರ ತಾಯಿ ಇಸ್ರೇಲ್‌ನ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಸಂಪರ್ಕಿಸಿ ದಾಖಲೆಯನ್ನು ಒಪ್ಪಿಸಲಾಗಿದ್ದು, ಪರಿಚಾರಕನ ಸ್ನೇಹಿತ ಹೊಸದಿಲ್ಲಿಗೆ ವಿಮಾನದಲ್ಲಿ ಬಂದು ನಿಯೋಗಕ್ಕೆ ದಾಖಲೆ ಹಸ್ತಾಂತರಿಸಿದ್ದಾರೆ. ಇದರ ಬಗ್ಗೆ ನಂತರ ನಡೆದ ತನಿಖೆಯಲ್ಲಿ ಯಾವುದೇ ಗೌಪ್ಯ ಮಾಹಿತಿ ಕಳ್ಳತನವಾದ ಬಗ್ಗೆ ಸಾಬೀತಾಗಿಲ್ಲ. ದಾಖಲೆ ಕಳೆದು ಹಾಕಿದ್ದ ಅಧಿಕಾರಿಗೆ ಎಚ್ಚರಿಕೆ ನೀಡಲಾಗಿದೆ. Advertisement
ಶಸ್ತ್ರಾಸ್ತ್ರ ದಾಖಲೆಯನ್ನೇ ಕಳೆದುಕೊಂಡಿದ್ದ ಇಸ್ರೇಲ್ ಅಧಿಕಾರಿಗಳು!
12:53 AM Apr 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.