Advertisement

ಕೋವಿಡ್ 19 ವೈರಸ್‌ ತಡೆಗೆ ಇಸ್ರೇಲ್‌ ಬಂಕರ್‌ ; ಏನಿದು ಹೊಸ ಪ್ಲ್ಯಾನ್?

07:22 PM Mar 28, 2020 | Hari Prasad |

ಕೋವಿಡ್ 19 ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ತನ್ನ ಅಭಿಯಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಇಸ್ರೇಲ್‌ ಸರ್ಕಾರ ಜೆರುಸಲೇಮ್‌ ಪರ್ವತ ಶ್ರೇಣಿಯಲ್ಲಿ ಯುದ್ಧ ಬಂಕರ್‌ ಒಂದನ್ನು ಆರಂಭಿಸಿದೆ!

Advertisement

ಯುದ್ಧ ಬಂಕರ್‌ಗೂ ಕೋವಿಡ್ 19 ವೈರಸ್ ಸೋಂಕು ಕುರಿತ ಜಾಗೃತಿಗೂ ಎತ್ತಣ ಸಂಬಂಧ ಎಂದು ಕೇಳಿದರೆ, ಸೋಂಕಿತರನ್ನು ಇರಿಸಿ, ಅವರ ಮೇಲೆ ನಿಗಾ ವಹಿಸಲು, ಸೋಂಕನ್ನು ನಿರ್ವಹಿಸಲು, ನಿಯಂತ್ರಿಸಲು ಮತ್ತು ಟ್ರ್ಯಾಕಿಂಗ್‌ಗೆ ಈ ಬಂಕರ್‌ ಸಹಕಾರಿಯಾಗಲಿದೆ ಎಂದು ಇಸ್ರೇಲ್‌ ಅಧಿಕಾರಿಗಳು ಹೇಳುತ್ತಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ವಿನಿಮಯದ ಉದ್ದೇಶಕ್ಕಾಗಿ ದಶಕದ ಹಿಂದೆ ನ್ಯಾಷನಲ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ ಬಂಕರ್‌ ಅನ್ನು ನಿರ್ಮಿಸಲಾಗಿದೆ. ವಾಸ ಯೋಗ್ಯ ಮನೆಗಳು ಮತ್ತು ಕಮಾಂಡ್‌ ಸೌಲಭ್ಯಗಳನ್ನು ಈ ಬಂಕರ್‌ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next