Advertisement

ಚಂದ್ರಯಾನಕ್ಕೆ ಇಸ್ರೇಲ್‌ ಯತ್ನ ವಿಫ‌ಲ

01:02 AM Apr 13, 2019 | mahesh |

ಜೆರುಸಲೇಂ: ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಪಡೆಯುವ ಇಸ್ರೇಲ್‌ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫ‌ಲವಾಗಿದೆ. ಗುರುವಾರ ಇಸ್ರೇಲ್‌ನ ಬೆರೆಶೀತ್‌ ಗಗನನೌಕೆ ಚಂದ್ರನ ಮೇಲೆ ಇಳಿಯಿತಾದರೂ, ಲ್ಯಾಂಡ್‌ ಆಗುವ ಕೆಲವೇ ನಿಮಿಷಗಳ ಮೊದಲು ಎಂಜಿನ್‌ ವೈಫ‌ಲ್ಯದಿಂದಾಗಿ ನಿಯಂತ್ರಣ ಕೇಂದ್ರದಿಂದ ಎಲ್ಲ ಸಂಪರ್ಕಗಳನ್ನೂ ಕಡಿದುಕೊಂಡಿದೆ.

Advertisement

ಈ ಬಗ್ಗೆ ಇಸ್ರೇಲ್‌ ಬಾಹ್ಯಾಕಾಶ ಉದ್ಯಮಗಳ ಪ್ರಧಾನ ವ್ಯವಸ್ಥಾಪಕ ಆಫ‌ರ್‌ ಡೊರೋನ್‌ ಮಾತನಾಡಿ, ಚಂದ್ರನ ಮೇಲೆ ನಮ್ಮ ನೌಕೆ ಇಳಿದಿದೆ. ಆದರೆ ಅದು ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆದಿಲ್ಲ ಎಂದಿದ್ದಾರೆ. ಇದೇ ವೇಳೆ ಇತ್ತೀಚೆಗಷ್ಟೇ ಮರು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಕೂಡ ‘ನಮ್ಮ ಯೋಜನೆ ನಾವು ಅಂದುಕೊಂಡಂತೆ ನಡೆಯದಿದ್ದರೂ, ಇದು ಮಹತ್ವದ ಸಾಧನೆ. ಮತ್ತೂಂದು ಪ್ರಯತ್ನವನ್ನು ನಾವು ಮಾಡಲಿದ್ದೇವೆ’ ಎಂದಿದ್ದಾರೆ.

ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಇಲ್‌ನ ಅಧ್ಯಕ್ಷ ಮೋರಿಸ್‌ ಕಾಹ್‌° ಮಾತನಾಡಿ, ನಾವು ಚಂದ್ರನ ಮೇಲೆ ಇಳಿದಿದ್ದೇವೆ. ಆದರೆ ಈ ಪ್ರಯಾಣ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ನಾವು ಈ ಯೋಜನೆಯನ್ನು ಪೂರ್ಣಗೊಳಿಸಲಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next