Advertisement

Israel ವಾರದ ಕದನ ವಿರಾಮ ಅಂತ್ಯ: ಇಸ್ರೇಲ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ

09:25 PM Dec 01, 2023 | Team Udayavani |

ಗಾಜಾ: ವಾರದ ಕದನವಿರಾಮ ಮುಗಿದ ನಿಮಿಷಗಳ ನಂತರ ಹಮಾಸ್‌ನೊಂದಿಗಿನ ಇಸ್ರೇಲ್‌ನ ಯುದ್ಧವು ಶುಕ್ರವಾರ ಪೂರ್ಣ ಬಲದಿಂದ ಪುನರಾರಂಭವಾಗಿದೆ.

Advertisement

ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿಗಳನ್ನು ನಡೆಸಲಾಗುತ್ತಿದೆ. ಮುತ್ತಿಗೆ ಹಾಕಿದ ಪ್ರದೇಶದಿಂದ ದಟ್ಟ ಕಪ್ಪು ಹೊಗೆ ಹೊರಹೊಮ್ಮಿದ್ದು ಇಸ್ರೇಲ್ ಗಾಜಾ ನಗರ ಮತ್ತು ಎನ್‌ಕ್ಲೇವ್‌ನ ದಕ್ಷಿಣ ಭಾಗಗಳ ಮೇಲೆ ಕರಪತ್ರಗಳನ್ನು ಬೀಳಿಸಿ ಹೋರಾಟವನ್ನು ತಪ್ಪಿಸಲು ನಾಗರಿಕರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಿದೆ.

ಇಸ್ರೇಲ್‌ನಲ್ಲಿ, ಗಾಜಾ ಸಮೀಪವಿರುವ ಹಲವಾರು ಸಾಮುದಾಯಿಕ ಫಾರ್ಮ್‌ಗಳಲ್ಲಿ ರಾಕೆಟ್‌ ದಾಳಿಗಳ ಎಚ್ಚರಿಕೆ ಸೈರನ್‌ಗಳು ಮೊಳಗಿವೆ. ಇದು ಉಗ್ರಗಾಮಿಗಳು ದಾಳಿಗಳನ್ನು ಪುನರಾರಂಭಿಸಿದ ಸಂಕೇತವಾಗಿದೆ. ಸುಮಾರು 140 ಇಸ್ರೇಲ್ ಒತ್ತೆಯಾಳುಗಳು ಇನ್ನೂ ಗಾಜಾದಲ್ಲಿದ್ದು, 100 ಕ್ಕೂ ಹೆಚ್ಚು ಜನರನ್ನು ಕದನವಿರಾಮದ ಸಮಯದಲ್ಲಿ ಬಿಡುಗಡೆ ಮಾಡಲಾಗಿದೆ.

ಇಸ್ರೇಲ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿ ಮಾಡಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಯ ಆರಂಭಿಕ ಮತ್ತು ದೀರ್ಘಕಾಲಿಕ ಪರಿಹಾರಕ್ಕೆ ಭಾರತದ ಬೆಂಬಲವನ್ನು ಒತ್ತಿಹೇಳಿದರು.

Advertisement

ಯುಎಇಯಲ್ಲಿ ನಡೆದ COP28 ವಿಶ್ವ ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಹೆರ್ಜೋಗ್ ಅವರನ್ನು ಭೇಟಿಯಾದರು.

ಅಕ್ಟೋಬರ್ 7 ರ ಹಮಾಸ್ ಉಗ್ರ ದಾಳಿಯಲ್ಲಿನ ಜೀವಹಾನಿಯ ಬಗ್ಗೆ ಪ್ರಧಾನಿ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಸಂತ್ರಸ್ತ ಜನರಿಗೆ ಮಾನವೀಯ ನೆರವಿನ ಮುಂದುವರಿದ ಮತ್ತು ಸುರಕ್ಷಿತ ವಿತರಣೆಯ ಅಗತ್ಯವನ್ನು ಪ್ರಧಾನ ಮಂತ್ರಿ ಪುನರುಚ್ಚರಿಸಿದರು” ಎಂದು ಬಾಗ್ಚಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next