Advertisement

ಪ್ಯಾಲೆಸ್ತೀನಿಯರು-ಇಸ್ರೇಲ್‌ ಪಡೆ ನಡುವೆ ಭಾರೀ ಘರ್ಷಣೆ : 200ಕ್ಕೂ ಹೆಚ್ಚು ಮಂದಿಗೆ ಗಾಯ

12:52 AM May 11, 2021 | Team Udayavani |

ಜೆರುಸಲೇಂ: ಜೆರುಸಲೇಂನ ಅಲ್‌ ಅಖಾÕ ಮಸೀದಿಯ ಹೊರಗಡೆ ಪ್ಯಾಲೆಸ್ತೀನಿಯರು ಹಾಗೂ ಇಸ್ರೇಲ್‌ ಪಡೆಗಳ ನಡುವೆ ಆರಂಭವಾಗಿರುವ ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯೆಹೂದಿಗಳು ಈ ಪ್ರದೇಶದಲ್ಲಿ ರಾಷ್ಟ್ರೀಯ ಪಥ ಸಂಚಲನ ನಡೆಸಲು ತಯಾರಿ ನಡೆಸುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ವಾರ್ಷಿಕ ಜೆರುಸಲೇಂ ದಿನದ ಧ್ವಜ ಪಥಸಂಚಲನದ ವೇಳೆ ಮಸೀದಿ ಇರುವ ಪ್ರದೇಶಕ್ಕೆ ಯೆಹೂದಿಗಳಿಗೆ ಪ್ರವೇಶ ನಿರ್ಬಂಧಿಸಲು ಇಸ್ರೇಲ್‌ ಪೊಲೀಸರು ಚಿಂತನೆ ನಡೆಸಿದ್ದರು. ಆದರೆ ನೂರಾರು ಯೆಹೂದಿ ಯುವಕರು ಘೋಷಣೆಗಳನ್ನು ಕೂಗುತ್ತಾ, ದೇಶ ಭಕ್ತಿಯ ಹಾಡು ಹಾಡುತ್ತಾ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ. ನಮ್ಮನ್ನು ಪ್ರಚೋದಿಸಲೆಂದೇ ಈ ರೀತಿ ಮಾಡಲಾಗಿದೆ ಎಂದು ಪ್ಯಾಲೆಸ್ತೀನಿಯರು ಆರೋಪಿಸಿದ್ದು, ಎರಡೂ ಕಡೆ ಭಾರೀ ಘರ್ಷಣೆ ಆರಂಭವಾಗಿದೆ.

ಹಿಂಸಾಚಾರದಲ್ಲಿ 215 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅವರನ್ನು ಚದುರಿಸಲು ಅಶ್ರುವಾಯು, ರಬ್ಬರ್‌ ಕೋಟೆಡ್‌ ಬುಲೆಟ್‌ ಗಳು, ಗ್ರೆನೇಡ್‌ ಗಳನ್ನು ಸಿಡಿಸಿದ್ದಾರೆ. ಅಲ್‌ ಅಖಾÕ ಮಸೀದಿಯೊಳಗೂ ಗ್ರೆನೇಡ್‌ ಗಳು ಬಂದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next