Advertisement

Rafah;ಒತ್ತೆಯಾಳುಗಳನ್ನು ರಂಜಾನ್‌ಗೆ ಮುನ್ನ ಹಿಂತಿರುಗಿಸದಿದ್ದಲ್ಲಿ…: ಇಸ್ರೇಲ್ ಎಚ್ಚರಿಕೆ

06:12 PM Feb 19, 2024 | Team Udayavani |

ಟೆಲ್ ಅವಿವ್ : ಮಾರ್ಚ್‌ 10 ಅಥವಾ 11ರ ನಿರೀಕ್ಷಿತ ರಂಜಾನ್ ಆರಂಭದ ವೇಳೆಗೆ ಹಮಾಸ್ ಸಂಘಟನೆ ಒತ್ತೆಯಾಳುಗಳನ್ನು ಹಿಂತಿರುಗಿಸದಿ ದ್ದರೆ ರಫಾಹ್ ದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.

Advertisement

ಇಸ್ರೇಲ್ ಯುದ್ಧದ ಕ್ಯಾಬಿನೆಟ್ ಸಚಿವ, ನಿವೃತ್ತ ಮಿಲಿಟರಿ ಮುಖ್ಯಸ್ಥ ಬೆನ್ನಿ ಗ್ಯಾಂಟ್ಜ್ ಅವರು ಜೆರುಸಲೆಮ್‌ನಲ್ಲಿ ಭಾನುವಾರ ನಡೆದ ಅಮೇರಿಕನ್ ಯಹೂದಿ ನಾಯಕರ ಸಮ್ಮೇಳನದಲ್ಲಿ ಕಟುವಾದ ಎಚ್ಚರಿಕೆಯನ್ನು ನೀಡಿದ್ದು, ರಂಜಾನ್ ಆರಂಭದ ವೇಳೆಗೆ ಹಮಾಸ್ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ರಫಾಹ್ ದಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ.

ಸ್ಥಳಾಂತರಗೊಂಡ 1.7 ಮಿಲಿಯನ್ ಪ್ಯಾಲೆಸ್ಟೀನಿನ್ ಜನರ ಪೈಕಿ ಬಹುಪಾಲು ಜನರು ಆಶ್ರಯ ಪಡೆದಿರುವ ನಗರದ ಮೇಲೆ ಯೋಜಿತ ದಾಳಿಗೆ ಇಸ್ರೇಲಿ ಸರಕಾರವು ಈ ಹಿಂದೆ ಗಡುವನ್ನು ವಿಧಿಸಿರಲಿಲ್ಲ. ಭಾರೀ ಸಾವುನೋವುಗಳ ಸಂಭಾವ್ಯತೆಯ ಭಯದಿಂದ, ವಿದೇಶಿ ಸರಕಾರಗಳು ಮತ್ತು ನೆರವು ಸಂಸ್ಥೆಗಳು ದಾಳಿಗೆ ಮುಂದಾಗಬಾರದು ಎಂದು ಇಸ್ರೇಲ್ ಅನ್ನು ಪದೇ ಪದೇ ಒತ್ತಾಯಿಸಿದ್ದವು.

ರಫಾಹ್, ನಾಲ್ಕು ತಿಂಗಳ-ಹಳೆಯ ಯುದ್ಧದ ಸಮಯದಲ್ಲಿ ಇಸ್ರೇಲ್ ಪಡೆಗಳಿಂದ ಆಕ್ರಮಣಕ್ಕೊಳಗಾಗದ ಕೊನೆಯ ಪ್ರಮುಖ ಗಜಾ ನಗರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next