Advertisement

Hindu ಸಂಖ್ಯೆ ಕುಸಿತ: ಕೈ-ಕಮಲ ವಾಕ್ಸಮರ!

01:44 AM May 10, 2024 | Team Udayavani |

ಪಾಟ್ನಾ: “ದೇಶದಲ್ಲಿ ಕಳೆದ 65 ವರ್ಷಗಳಲ್ಲಿ ಹಿಂದೂಗಳ ಸಂಖ್ಯೆ ಕುಸಿದು, ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ’ ಎಂಬ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ವರದಿಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಪಕ್ಷಗಳು ವರದಿ ಬಿಡುಗಡೆಯ ಸಮಯದ ಬಗ್ಗೆ
ಪ್ರಶ್ನಿಸಿದರೆ ಕಾಂಗ್ರೆಸ್‌ನ ದುರಾಡಳಿತ ಮತ್ತು ತುಷ್ಟೀಕರಣ ನೀತಿಯ ಫ‌ಲವಾಗಿ ಜನಸಂಖ್ಯೆಯಲ್ಲಿ ಏರುಪೇರಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

ವರದಿಯನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಳ್ಳಿ ಹಾಕಿದ್ದಾರೆ. ರಾಯ್‌ಬರೇಲಿ ಚುನಾವಣ ಪ್ರಚಾರದ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, “ಈ ವರದಿ ಎಲ್ಲಿಂದ ಬಂತು ಎಂದು ನಿಮ್ಮ ಕಚೇರಿಯನ್ನೇ ಕೇಳಲು ಹೇಳಿ’ ಎಂದು ತೀಕ್ಷ್ಣವಾಗಿ ಹೇಳುವ ಮೂಲಕ ಪರೋಕ್ಷವಾಗಿ ಪ್ರಧಾನಿ ಕಾರ್ಯಾಲಯದ ವಿರುದ್ಧ ಹರಿಹಾಯ್ದಿದ್ದಾರೆ.

ಹಿಂದೂಗಳಿಗೆ ದೇಶವೇ ಇರುವುದಿಲ್ಲ: ಬಿಜೆಪಿ
65 ವರ್ಷಗಳಲ್ಲಿ ಹಿಂದೂಗಳ ಸಂಖ್ಯೆ ಶೇ. 7.8ರಷ್ಟು ಕುಸಿದರೆ ಮುಸ್ಲಿಮರ ಸಂಖ್ಯೆ ಶೇ. 43ರಷ್ಟು ಹೆಚ್ಚಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಇದನ್ನೇ ಮಾಡಿದ್ದು. ದೇಶ ವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಹಿಂದೂ ಗಳಿಗಾಗಿ ದೇಶವೇ ಇರುವುದಿಲ್ಲ ಎಂದು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ.

ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಜನಗಣತಿ ಮಾಡದೆಯೇ ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆಯನ್ನು ನಿರ್ಧರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರವು ಒಡಕು ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next