ಜೆರುಸೆಲಮ್: ಗಾಜಾ ಪಟ್ಟಿಯಲ್ಲಿರುವ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾವನ್ನು ಹಮಾಸ್ ಭಯೋತ್ಪಾದಕರು ತಮ್ಮ ನೆಲೆಯಾಗಿ ಬಳಸಿಕೊಂಡಿರುವುದು ಅಲ್ಲದೆ ಇದೇ ಆಸ್ಪತ್ರೆಯಲ್ಲಿ ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.
ಗಾಜಾ ಪಟ್ಟಿಯ ಮೇಲೆ ಹಿಡಿತ ಸಾಧಿಸಿರುವ ಇಸ್ರೇಲ್ ಪಡೆ ಇಲ್ಲಿನ ಆಸ್ಪತ್ರೆಯೊಳಗೆ ಸಂಪೂರ್ಣ ಕಾರ್ಯಚರಣೆ ನಡೆಸುತ್ತಿದೆ ಈ ವೇಳೆ ಇಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ಇಸ್ರೇಲ್ ಪಡೆಗೆ ಹಮಾಸ್ ಭಯೋತ್ಪಾದಕರು ಇಸ್ರೇಲ್ ನ ಒತ್ತೆಯಾಳುಗಳನ್ನು ಇದೆ ಆಸ್ಪತ್ರೆಯಲ್ಲಿ ಇರಿಸಿಕೊಂಡಿದ್ದರು ಜೊತೆಗೆ ಹಲವರನ್ನು ಇಲ್ಲಿ ಗಲ್ಲಿಗೇರಿಸಲಾಗಿದೆ ಇಬ್ಬರು ವಿದೇಶಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಟ್ವಿಟರ್ ‘X’ ನಲ್ಲಿ ಅಕ್ಟೋಬರ್ ೭ ರಂದು ನಡೆದ ಇಲ್ಲಿನ ಚಿತ್ರಣವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ.
‘X’ ನಲ್ಲಿ ಬಿಡುಗಡೆಯಾದ ವೀಡಿಯೊದಲ್ಲಿ, ಹಮಾಸ್ ಭಯೋತ್ಪಾದಕರು ಇಬ್ಬರು ಒತ್ತೆಯಾಳುಗಳನ್ನು (ಒಬ್ಬ ನೇಪಾಳಿ ಮತ್ತು ಥಾಯ್) ಅಕ್ಟೋಬರ್ 7 ರಂದು ಇಸ್ರೇಲ್‌ನಿಂದ ಅಪಹರಿಸಿ ಅಲ್-ಶಿಫಾ ಆಸ್ಪತ್ರೆಗೆ ಕರೆದೊಯ್ಯವುದು ಕಂಡುಬಂದಿದೆ. ಅದರಲ್ಲಿ ಓರ್ವ ಗಾಯಗೊಂಡು ಆತನನ್ನು ಸ್ಟ್ರೆಚ್ಚರ್ ಮೂಲಕ ಆಸ್ಪತ್ರೆಗೆ ಸಾಗಿಸುವುದು ಹಾಗೂ ಇನ್ನೋರ್ವನನ್ನು ಕರೆದೊಯ್ಯುವುದು ಕಾಣಬಹುದು.
ಹಮಾಸ್ ಭಯೋತ್ಪಾದಕರು ಆಸ್ಪತ್ರೆಯನ್ನು “ಭಯೋತ್ಪಾದಕ ಮೂಲಸೌಕರ್ಯಗಳ ಕೇಂದ್ರವಾಗಿ ಬಳಸಿಕೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಇನ್ನೊಂದು ವೀಡಿಯೊದಲ್ಲಿ, ಇಸ್ರೇಲ್ ತನ್ನ ಪಡೆಗಳು “ಗುಪ್ತಚರ-ಆಧಾರಿತ ಕಾರ್ಯಾಚರಣೆ” ಸಮಯದಲ್ಲಿ ಅಲ್-ಶಿಫಾ ಆಸ್ಪತ್ರೆಯ ಸಂಕೀರ್ಣದ ಕೆಳಗೆ 10 ಮೀಟರ್‌ಗಳಷ್ಟು ಅಗಲ 55-ಮೀಟರ್ ಉದ್ದದ ಸುರಂಗವನ್ನು ಪತ್ತೆಹಚ್ಚಿದ್ದು ಇದರ ವಿಡಿಯೋ ಕೂಡ ‘X’ ನಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: Visakhapatnam ಬಂದರಿನಲ್ಲಿ ಭಾರಿ ಅಗ್ನಿ ಅವಘಡ, 40 ಕ್ಕೂ ಹೆಚ್ಚು ದೋಣಿಗಳು ಬೆಂಕಿಗಾಹುತಿ