ಜೆರುಸಲೇಂ: ಸೆಂಟ್ರಲ್ ಗಾಜಾ ಪಟ್ಟಿ ಪ್ರದೇಶದಲ್ಲಿ ಹಮಾಸ್ ಉಗ್ರರು ಹಿಡಿದಿಟ್ಟುಕೊಂಡಿದ್ದ ನಾಲ್ವರು ಇಸ್ರೇಲ್ ಪ್ರಜೆಗಳನ್ನು ಇಸ್ರೇಲ್ ರಕ್ಷಣಾ ಪಡೆ ವಿಶೇಷ ಕಾರ್ಯಾಚರಣೆ ಮೂಲಕ ಶನಿವಾರ (ಜೂನ್ 08) ರಕ್ಷಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದ ಒಂದೇ ಕುಟುಂಬದ ನಾಲ್ವರಿಂದ ವಿಷ ಸೇವನೆ: ಓರ್ವ ಮೃತ್ಯು
ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ(25ವರ್ಷ), ಅಲ್ಮೋಗ್ ಮೀರ್ ಜಾನ್ (21ವರ್ಷ), ಆಂಡ್ರೆ ಕೊಜ್ಲೋವ್ (27ವರ್ಷ) ಹಾಗೂ ಶ್ಲೋಮಿ ಝಿವ್ (40ವರ್ಷ) ಎಂದು ಗುರುತಿಸಲಾಗಿದೆ.
ಇವರನ್ನು ಹಮಾಸ್ ಉಗ್ರರು 2023ರ ಅಕ್ಟೋಬರ್ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ತಾವು ಉತ್ತಮ ಆರೋಗ್ಯ ಹೊಂದಿರುವುದಾಗಿ ನಾಲ್ವರು ಒತ್ತೆಯಾಳುಗಳು ಪ್ರತಿಕ್ರಿಯೆ ನೀಡಿದ್ದು, ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ಮೆಡಿಕಲ್ ಸೆಂಟರ್ ಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.