ಟೆಲ್ ಅವೀವ್ : ರಾಕ್ಷಸಸಿ ಕೃತ್ಯ ಎಸಗಿದ ಹಮಾಸ್ ಹತ್ಯೆಗೀಡಾದ ಮತ್ತು ಸುಟ್ಟ ಶಿಶುಗಳ ಭಯಾನಕ ಚಿತ್ರಗಳನ್ನು ಇಸ್ರೇಲ್ ಗುರುವಾರ ಬಿಡುಗಡೆ ಮಾಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಪ್ರವಾಸದಲ್ಲಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರಿಗೆ ಕೆಲವು ಚಿತ್ರಗಳನ್ನು ತೋರಿಸಿದರು.
ಕೆಲವು ಚಿತ್ರಗಳಲ್ಲಿ ಅಮಾಯಕ ಶಿಶುಗಳ ಕಪ್ಪು ಸುಟ್ಟ ದೇಹಗಳನ್ನು ಕಾಣಬಹುದಾಗಿದೆ. ಶನಿವಾರ ಬೆಳಗ್ಗೆ ಹಠಾತ್ ದಾಳಿ ನಡೆಸಿದ್ದ ಹಮಾಸ್ ಭಯೋತ್ಪಾದಕರು ಅಮಾಯಕ ಶಿಶುಗಳನ್ನು ಕ್ರೂರವಾಗಿ ಹತ್ಯೆ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ಪ್ರಧಾನಿಯ ಅಧಿಕೃತ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಮಾಡಲಾಗಿದೆ. ಸುಮಾರು 40 ಶಿಶುಗಳ ಶವಗಳು, ಅವುಗಳಲ್ಲಿ ಕೆಲವು ಶಿರಚ್ಛೇದ ಮಾಡಲ್ಪಟ್ಟಿದ್ದು ಇಸ್ರೇಲ್ ರಕ್ಷಣಾ ಪಡೆಗಳು ಪತ್ತೆಹಚ್ಚಿವೆ ಎಂದು ಓಕಲ್ ಮಾಧ್ಯಮ ವರದಿ ಮಾಡಿದೆ.
ಕ್ರರೂರತ್ವಕ್ಕೆ ಇನ್ನೇನು ಬೇರೆ ಸಾಕ್ಷಿ ಇಲ್ಲ ಎಂಬಂತೆ ಹಮಾಸ್ ಭಯೋತ್ಪಾದಕರು 40 ಶಿಶುಗಳ ಶಿರಚ್ಛೇದವನ್ನು ಮಾಡಿರುವ ಕುರಿತು i24 ನ್ಯೂಸ್ ಪತ್ರಕರ್ತ ನಿಕೋಲ್ ಝೆಡೆಕ್ ಅವರು ಇಂಡಿಯಾ ಟುಡೇ ಮಾಧ್ಯಮಕ್ಕೆ ತಿಳಿಸಿದ್ದಾರೆ. “ಇದು ಇಸ್ರೇಲಿ ಪ್ರದೇಶದಲ್ಲಿ ನಾವು ನೋಡಿದ ಅತ್ಯಂತ ಕೆಟ್ಟ ಹಿಂಸಾಚಾರಗಳಲ್ಲಿ ಒಂದಾಗಿದೆ. ಈ ರೀತಿಯ ಏನಾದರೂ ಎಂದಿಗೂ ಸಂಭವಿಸಿಲ್ಲ” ಎಂದು ಹೇಳಿದ್ದಾರೆ.
ಗುರುವಾರ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಈ ದಾಳಿಯು “ಕ್ರೂರ ಕ್ರೌರ್ಯ” ದ ಪ್ರಚಾರವಾಗಿದೆ ಎಂದು ಹೇಳಿದ್ದರು, “ಭಯೋತ್ಪಾದಕರು ಮಕ್ಕಳ ಶಿರಚ್ಛೇದನದ ಚಿತ್ರಗಳನ್ನು ನಾನು ಖಚಿತಪಡಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ” ಎಂದಿದ್ದರು.