Advertisement

ಕೋಲ್ಕತಾದಲ್ಲಿ ವೀಸಾ ಅರ್ಜಿ ಕೇಂದ್ರ ಆರಂಭಿಸಿದ ಇಸ್ರೇಲ್‌

06:03 PM Aug 11, 2018 | Team Udayavani |

ಕೋಲ್ಕತ : ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಇಸ್ರೇಲ್‌ ಗೆ ಭೇಟಿ ನೀಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ, ಪಶ್ಚಿಮ ಬಂಗಾಲ ಮತ್ತು ಈಶಾನ್ಯ ರಾಜ್ಯಗಳ ಪ್ರವಾಸಿಗರಿಗಾಗಿ, ಇಸ್ರೇಲ್‌ ಕೋಲ್ಕತದಲ್ಲಿ ವೀಸಾ ಅರ್ಜಿ ಕೇಂದ್ರವೊಂದನ್ನು ಆರಂಭಿಸಿದೆ ಎಂದು ಇಸ್ರೇಲ್‌ ದೂತಾವಾಸ ಮೂಲ ತಿಳಿಸಿದೆ.

Advertisement

ದಿಲ್ಲಿ ಕೇಂದ್ರ ವ್ಯಾಪ್ತಿಯಡಿಯ ವೀಸಾ ಅರ್ಜಿಗಳನ್ನು ಕೂಡ ಕೋಲ್ಕತಾದ ಹೊಸ ಕೇಂದ್ರದಲ್ಲಿ ಸ್ವೀಕರಿಸಲಾಗುವುದು ಎಂದು ದೂತಾವಾಸ ಪ್ರಕಟನೆ ತಿಳಿಸಿದೆ. 

ಉದ್ಯೋಗ, ಉದ್ಯಮ, ಪ್ರವಾಸ, ಸಭೆ, ಸಮಾವೇಶ ಮತ್ತು ವಿದ್ಯಾರ್ಥಿ ವರ್ಗದ ವೀಸಾ ಅರ್ಜಿಗಳನ್ನು ಈ ಕೇಂದ್ರದಲ್ಲಿ ಸ್ವೀಕರಿಸಲಾಗುತ್ತದೆ ಎಂದು ದೂತಾವಾಸ ಮೂಲ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next