Advertisement

Israel; ಬೈರುತ್‌ ಮೇಲೆ ಕ್ಷಿಪಣಿದಾಳಿ: ಹೆಜ್ಬುಲ್ಲಾ ಕಮಾಂಡರ್‌ ಹ*ತ್ಯೆ

02:22 AM Sep 27, 2024 | Team Udayavani |

ಟೆಲ್‌ ಅವೀವ್‌/ ಬೈರುತ್‌: ಇಸ್ರೇಲ್‌ನ ಹೃದಯಭಾಗ ಟೆಲ್‌ ಅವೀವ್‌ ಮೇಲೆ ದಾಳಿ ನಡೆಸಿದ್ದ ಹೆಜ್ಬುಲ್ಲಾ ಉಗ್ರರ ವಿರುದ್ಧ ಗುರುವಾರ ಇಸ್ರೇಲ್‌ ಮಿಲಿಟರಿ ಪಡೆ ರಣಕಹಳೆ ಮೊಳಗಿಸಿದೆ. ಲೆಬ ನಾನ್‌ನ ರಾಜಧಾನಿ ಬೈರುತ್‌ನ 20ಕ್ಕೂ ಅಧಿಕ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಘಟನೆಯಲ್ಲಿ ಹೆಜ್ಬುಲ್ಲಾ ಉಗ್ರರ ಡ್ರೋನ್‌ ಪಡೆಯ ಕಮಾಂಡರ್‌ನನ್ನು ಹೊಡೆದುರುಳಿಸಿ ದ್ದಾಗಿ ತಿಳಿಸಿದೆ.

Advertisement

ಅಮೆರಿಕ, ಐರೋಪ್ಯ ಒಕ್ಕೂಟ, ಕತಾರ್‌, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಕೆಲವು ಅರಬ್‌ ರಾಷ್ಟ್ರಗಳಿಂದ 21 ದಿನಗಳ ಕದನವಿರಾಮ ಘೋಷಿ ಸಲು ಒತ್ತಡ ಹೇರಿದ್ದರೂ, ಅದಕ್ಕೆ ಇಸ್ರೇಲ್‌ ಮಣಿದಿಲ್ಲ. ಹೆಜ್ಬುಲ್ಲಾ ಉಗ್ರರನ್ನು ಕೊಲ್ಲಲು ಸೈನಿಕರಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆದೇಶಿಸಿದ್ದಾರೆ. ಬೈರುತ್‌ನ ಉಪನಗರ ಮತ್ತು ದಕ್ಷಿಣ ಬೈರುತ್‌ ಮೇಲೆ ದಾಳಿ ಹೆಚ್ಚಿಸಲಾಗಿದೆ. ಈ ವೇಳೆ ಹೆಜ್ಬುಲ್ಲಾ ಮುಖ್ಯಸ್ಥನಿದ್ದ ಮನೆ ಮೇಲೆ ದಾಳಿ ನಡೆಸಿ, ಆತನನ್ನು ಹೊಡೆದುರುಳಿಸಿರುವು ದಾಗಿ ಮಾಹಿತಿ ನೀಡಿದೆ. ಇದಲ್ಲದೇ, ಸಿರಿಯಾದಿಂದ ಹೆಜ್ಬುಲ್ಲಾಗೆ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದ್ದ ಸಿರಿಯಾ-ಲೆಬ ನಾನ್‌ ಗಡಿಯಲ್ಲಿದ್ದ ಹೆಜ್ಬುಲ್ಲಾ ಮೂಲಸೌಕರ್ಯಗಾರವನ್ನೂ ಕ್ಷಿಪಣಿ ದಾಳಿ ಮೂಲಕ ನಾಶ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next