Advertisement

Israel-Hamas War; ‘ಯುದ್ಧ ಮುಗಿಯಬೇಕಾದರೆ…’: ಗಾಜಾ ಜನರಿಗೆ ಇಸ್ರೇಲ್ ರಕ್ಷಣಾ ಸಚಿವರ ಆಫರ್

12:09 PM Nov 05, 2023 | Team Udayavani |

ಟೆಲ್ ಅವಿವ್: ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ತನ್ನ ನೆಲದ ದಾಳಿಯನ್ನು ತೀವ್ರಗೊಳಿಸುತ್ತಿದ್ದಂತೆ, ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಶನಿವಾರ (ಸ್ಥಳೀಯ ಕಾಲಮಾನ) ಪ್ಯಾಲೇಸ್ಟಿನಿಯನ್ ಎನ್‌ ಕ್ಲೇವ್‌ ನ ಜನರಿಗೆ ಯುದ್ಧವನ್ನು ಕಡಿಮೆ ಮಾಡಬೇಕಾದರೆ ಭಯೋತ್ಪಾದಕ ಗುಂಪಿನ ಗಾಜಾ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು ಪತ್ತೆಹಚ್ಚಲು ಮತ್ತು ಕೊಲ್ಲಲು ಕರೆ ನೀಡಿದರು.

Advertisement

ಹಮಾಸ್ ಭಯೋತ್ಪಾದಕರನ್ನು ಸುರಂಗಗಳಿಗೆ ತಪ್ಪಿಸಿಕೊಳ್ಳದಂತೆ ತಡೆಯಲು ಇಸ್ರೇಲಿ ಮಿಲಿಟರಿ ಪದಾತಿಸೈನ್ಯ ಮತ್ತು ಟ್ಯಾಂಕ್‌ಗಳನ್ನು ಬಳಸಿದಾಗ ಅವರು ಈ ರೀತಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಸ್ರೇಲಿ ಪಡೆಗಳು ಹಮಾಸ್ ಬೆಟಾಲಿಯನ್ ಗಳನ್ನು ಬೇಟೆಯಾಡುತ್ತಿವೆ ಎಂದು ಗ್ಯಾಲಂಟ್ ಹೇಳಿದರು. ಅವರು ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಗಾಜಾ ನಗರದಲ್ಲಿ ಭಯೋತ್ಪಾದಕ ಟಾರ್ಗೆಟ್ ಗಳನ್ನು ಹೊಡೆಯುತ್ತಿದ್ದಾರೆ ಎಂದು ಒತ್ತಿ ಹೇಳಿದರು.

“ನಾವು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ನನ್ನು ತಲುಪಿ ಅವನನ್ನು ಕೊಲ್ಲುತ್ತೇವೆ. ಒಂದು ವೇಳೆ ನಮಗಿಂತ ಮೊದಲು ಗಾಜಾದ ಜನರು ಅವನನ್ನು ಕಂಡರೆ ಯುದ್ಧವನ್ನು ಮುಗಿಸಿ ಬಿಡಿ” ಎಂದಿದ್ದಾರೆ.

ಯುದ್ಧ ಮುಗಿದ ಬಳಿಕ ಗಾಜಾ ನಗರಕ್ಕೆ ಇಸ್ರೇಲ್ ನಿಂದ ಯಾವುದೇ ಭದ್ರತಾ ಬೆದರಿಕೆ ಇರುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

Advertisement

“ಗಾಜಾದಲ್ಲಿ ಇನ್ನು ಮುಂದೆ ಹಮಾಸ್ ಇರುವುದಿಲ್ಲ ಮತ್ತು ಗಾಜಾದಲ್ಲಿ ತಲೆ ಎತ್ತುವ ಯಾರ ವಿರುದ್ಧ ಬೇಕಾದರೂ ಭದ್ರತಾ ಕ್ರಮವನ್ನು ತೆಗೆದುಕೊಳ್ಳಲು ಇಸ್ರೇಲ್ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತದೆ” ಎಂದು ಅವರು ಒತ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next