ಟೆಲ್ ಅವಿವ್: ಗಾಜಾ ಪಟ್ಟಿಯ ಮೇಲೆ ನಿರಂತರ ರಾಕೆಟ್, ಕ್ಷಿಪಣಿ ದಾಳಿ ನಡೆಸುವ ಮೂಲಕ ಹಮಾಸ್ ದಾಳಿಗೆ ಪ್ರತೀಕಾರ ತೀರಿಸುತ್ತಿರುವ ಇಸ್ರೇಲ್ ನ ರಕ್ಷಣಾ ಪಡೆ ಗಾಜಾ ಪಟ್ಟಿಗೆ ನುಗ್ಗಿ 250ಕ್ಕೂ ಅಧಿಕ ಒತ್ತೆಯಾಳುಗಳನ್ನು ರಕ್ಷಿಸಿರುವ ವಿಡಿಯೋ ಫೂಟೇಜ್ ಅನ್ನು ಶುಕ್ರವಾರ (ಅಕ್ಟೋಬರ್ 13) ಬಿಡುಗಡೆಗೊಳಿಸಿದೆ.
ಇದನ್ನೂ ಓದಿ:Panaji: 37ನೇ ರಾಷ್ಟ್ರೀಯ ಕ್ರೀಡಾ ಸ್ಪರ್ಧೆ; ಸ್ಥಳ, ಸಿದ್ಧತೆ ಪರಿಶೀಲಿಸಿದ ಮುಖ್ಯಮಂತ್ರಿ
ಇಸ್ರೇಲ್ ರಕ್ಷಣಾ ಪಡೆ( IDF)ಯ ಸಾಹಸದ ಕಾರ್ಯಾಚರಣೆಯಲ್ಲಿ 60 ಹಮಾಸ್ ಭಯೋತ್ಪಾದಕರು ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಐಡಿಎಫ್ ಮಾಹಿತಿಯ ಪ್ರಕಾರ, ಒತ್ತೆಯಾಳಾಗಿದ್ದ 250 ಇಸ್ರೇಲ್ ನಾಗರಿಕರನ್ನು ರಕ್ಷಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ 60 ಹಮಾಸ್ ಉಗ್ರರು ಹತ್ಯೆಗೀಡಾಗಿದ್ದು, ಹಮಾಸ್ ನ ದಕ್ಷಿಣ ನೌಕಾ ವಿಭಾಗದ ಡೆಪ್ಯುಟಿ ಕಮಾಂಡರ್ ಮುಹಮ್ಮದ್ ಅಬು ಅಲಿ ಸೇರಿದಂತೆ 26 ಜನರನ್ನು ಸೆರೆಹಿಡಿಯಲಾಗಿದೆ ಎಂದು ವಿವರಿಸಿದೆ.
ಇಸ್ರೇಲ್ ರಕ್ಷಣಾ ಪಡೆ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ, ಗಾಜಾ ಸೆಕ್ಯುರಿಟಿ ಡಿಫೆನ್ಸ್ ಸಮೀಪದ ಕಟ್ಟಡದೊಳಕ್ಕೆ ಇಸ್ರೇಲ್ ಸೈನಿಕರು ನುಗ್ಗಿ, ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಸೈನಿಕರು ಕವರ್ ಅಪ್ ಆಗಿ ಕಾರ್ಯಾಚರಣೆ ನಡೆಸಿ, ಔಟ್ ಪೋಸ್ಟ್ ಮೇಲೆ ಗ್ರೆನೇಡ್ ಎಸೆದು, ನಂತರ ಒತ್ತೆಯಾಳುಗಳನ್ನು ರಕ್ಷಿಸಿರುವ ದೃಶ್ಯ ವಿಡಿಯೋದಲ್ಲಿದೆ.
ಒತ್ತೆಯಾಳುಗಳನ್ನು ಬಂಕರ್ ನಿಂದ ಹೊರಗೆ ತಂದು ಕರೆದೊಯ್ಯುತ್ತಿದ್ದರೆ, ಮತ್ತೊಂದೆಡೆ ಹಮಾಸ್ ಬಂಡುಕೋರರನ್ನು ಸೆರೆಹಿಡಿದು ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್ ದಾಳಿಯಲ್ಲಿ 1,200 ಇಸ್ರೇಲ್ ನಾಗರಿಕರು ಮೃತರಾಗಿದ್ದು, ಇಸ್ರೇಲ್ ದಾಳಿಗೆ ಗಾಜಾಪಟ್ಟಿಯಲ್ಲಿ 1,400 ಜನರು ಸಾವಿಗೀಡಾಗಿದ್ದಾರೆ.
ಇಸ್ರೇಲ್ ಭದ್ರತಾ ಪಡೆ ಗಾಜಾ ಸೆಕ್ಯುರಿಟಿ ಫೆನ್ಸ್ ಸಮೀಪ ಸುತ್ತುವರಿದು ಕಾರ್ಯಾಚರಣೆ ನಡೆಸುವ ಮೂಲಕ ಸೂಫಾ ಮಿಲಿಟರಿ ಘಟಕವನ್ನು ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.