ಜೆರುಸಲೇಂ: ರಷ್ಯಾ ಜತೆಗೆ 39 ಸಾವಿರ ಕೋಟಿ ರೂ. ವೆಚ್ಚದ ಎಸ್-400 ಟ್ರಯಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಬೆನ್ನಲ್ಲೇ ಭಾರತ ಸರ್ಕಾರವು, ಈಗ ಇಸ್ರೇಲ್ ಕಂಪನಿ ಜತೆಗೆ 5,690 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಅದರನ್ವಯ ಬರಾಕ್ 8 ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಉತ್ಪಾದಿಸಲಾಗುತ್ತದೆ.
ಬೆಂಗಳೂರಿನಲ್ಲಿರುವ ಭಾರತ್ ಇಲೆಕ್ಟ್ರಾನಿಕ್ಸ್ ನಲ್ಲಿ ಕ್ಷಿಪಣಿಯ ಮುಖ್ಯ ಭಾಗಗಳನ್ನು ತಯಾರಿಸಲಾಗುತ್ತದೆ. ಇಸ್ರೇಲ್‌ನ ಇಸ್ರೇಲ್ ಏರೋಸ್ಪೇಸ್ ಇಂಡ ಸ್ಟ್ರೀಸ್ (ಐಎಐ) ದೂರ ವ್ಯಾಪ್ತಿಯ ಕ್ಷಿಪಣಿ (ಎಲ್‌ಆರ್- ಎಸ್ ಎಎಂ) ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆ( ಎಎಂಡಿ )ಯನ್ನು ಪೂರೈಸಲಿದೆ. ಭಾರ ತೀಯ ನೌಕಾಪಡೆಗಾಗಿ ಕಡಲ ತೀರ ರಕ್ಷಣೆ ಗೆಂದೇ ಮೀಸಲಾಗಿ ಇರುವ ಬರಾಕ್ 8ನ್ನು 7 ನೌಕಾಪಡೆಯ ಹಡಗುಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ ಎಂದು “ಗ್ಲೋಬ್ಸ್’ ಪತ್ರಿಕೆ ವರದಿ ಮಾಡಿದೆ.
ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಇಸ್ರೇಲ್‌ನ ಅತ್ಯಂತ ದೊಡ್ಡ ರಕ್ಷಣೆ ಮತ್ತು ವಿಮಾನಯಾನ ಕಂಪನಿಯಾಗಿದೆ. ಅದು ಕ್ಷಿಪಣಿ ನಿರೋಧಕ ವ್ಯವಸ್ಥೆ, ಗುಪ್ತಚರ ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ರಕ್ಷಣಾ ವ್ಯವಸ್ಥೆಗಳನ್ನು ಉತ್ಪಾದಿ ಸುತ್ತದೆ. ಒಪ್ಪಂದದ ಬಗ್ಗೆ ಸ್ಪಷ್ಟನೆ ನೀಡಿರುವ ಐಎಐ ಸಿಇಒ ಮತ್ತು ಅಧ್ಯಕ್ಷ ನಿನ್ರೋಡ್ ಶೆಫ್ಟರ್ ಹಲವು ವರ್ಷಗಳಿಂದ ಇಸ್ರೇಲ್ ಮತ್ತು ಭಾರತದ ನಡುವೆ ಉತ್ತಮ ಬಾಂಧವ್ಯ ಇದೆ.
ಅದರಿಂದಾಗಿಯೇ ಜಂಟಿಯಾಗಿ ಕ್ಷಿಪಣಿ ತಯಾರಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದ್ದಾರೆ.