Advertisement

“ಅಲ್ಪ ಪ್ರಮಾಣ’ದ ಡ್ರಗ್ಸ್‌ ಹೊಂದಿದ್ದರೆ ಅಪರಾಧವಲ್ಲ?

12:44 AM Oct 25, 2021 | Team Udayavani |

ಹೊಸದಿಲ್ಲಿ: ವೈಯಕ್ತಿಕ ಸೇವನೆಗಾಗಿ ಅಲ್ಪಪ್ರಮಾಣದಲ್ಲಿ ಮಾದಕದ್ರವ್ಯ(ಡ್ರಗ್ಸ್‌)ವನ್ನು ಇಟ್ಟುಕೊಂಡಿರುವುದು ಅಪರಾಧವಲ್ಲ ಎಂಬ ನಿಯಮ ಸದ್ಯದಲ್ಲೇ ಜಾರಿಯಾಗುವ ಸಾಧ್ಯತೆಯಿದೆ.

Advertisement

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮಾದಕದ್ರವ್ಯಗಳ ನಿಯಂತ್ರಣ ಕಾಯ್ದೆ(ಎನ್‌ಡಿಪಿಎಸ್‌)ಯ ಪರಿಶೀಲನೆ ನಡೆಸಿ ಕಂದಾಯ ಇಲಾಖೆಗೆ ಸಲ್ಲಿಸಿರುವ ಶಿಫಾರಸಿನಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿರುವ ಸುದ್ದಿ ಸದ್ದು ಮಾಡುತ್ತಿರುವಂತೆಯೇ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಕಳೆದ ವಾರವೇ ಸಚಿವಾಲಯವು ಈ ಶಿಫಾರಸುಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಿದೆ.

ಯಾವುದೇ ವ್ಯಕ್ತಿಯು ತನ್ನ ಸ್ವಂತ ಸೇವನೆಗಾಗಿ ಅಲ್ಪ ಪ್ರಮಾ ಣದಲ್ಲಿ ಡ್ರಗ್ಸ್‌ ಇಟ್ಟುಕೊಂಡಿದ್ದರೆ ಅದು ಅಪರಾಧವಲ್ಲ ಎಂದು ಪರಿಗಣಿಸಲು ಶಿಫಾರಸು ಮಾಡಲಾಗಿದೆ. ಜತೆಗೆ, ಇಂಥವರಿಗೆ ಜೈಲು ಶಿಕ್ಷೆ ವಿಧಿಸುವ ಬದಲು ಸರಕಾರಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ ಎಂದು “ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

Advertisement

ಅಲ್ಪ ಪ್ರಮಾಣ ಎಂದರೆ ಎಷ್ಟು?: ಪ್ರಸ್ತುತ ಎನ್‌ಡಿಪಿಎಸ್‌ ಕಾಯ್ದೆಯ ಪ್ರಕಾರ, ಮಾದಕದ್ರವ್ಯವನ್ನು ಹೊಂದಿರುವುದು ಕ್ರಿಮಿನಲ್‌ ಅಪರಾಧವಾಗಿದೆ. ತಪ್ಪಿತಸ್ಥರಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ 20 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕಂದಾಯ ಇಲಾಖೆಯ ಪ್ರಕಾರ, “1 ಕೆಜಿವರೆಗಿನ ಗಾಂಜಾವನ್ನು “ಅಲ್ಪ ಪ್ರಮಾಣದ್ದು’ ಎಂದು ಪರಿಗಣಿಸ ಲಾಗುತ್ತದೆ, 20 ಕೆಜಿ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು “ವಾಣಿಜ್ಯ ಪ್ರಮಾಣದ್ದು’ ಎಂದು ಕರೆಯಲಾಗುತ್ತದೆ. ಚರಸ್‌ ಅಥವಾ ಹಶೀಶ್‌ನಲ್ಲಿ 100ಗ್ರಾಂ. ಅನ್ನು ಅಲ್ಪ ಪ್ರಮಾಣದ್ದೆಂದೂ, 1 ಕೆಜಿ ಅಥವಾ ಹೆಚ್ಚಿನದ್ದನ್ನು ವಾಣಿಜ್ಯ ಪ್ರಮಾಣದ್ದೆಂದು ಪರಿಗಣಿಸಲಾಗುತ್ತದೆ.’

Advertisement

Udayavani is now on Telegram. Click here to join our channel and stay updated with the latest news.

Next