Advertisement

ದ್ವೀಪ ಯಾತ್ರೆ

06:00 AM Jun 29, 2018 | |

ಸುತ್ತೆಲ್ಲ ನೋಡಿದ್ರೆ ಜಲರಾಶಿ. ನಡುವೆ ಒಂದು ಅದ್ಭುತವಾದ ಪುಟ್ಟ ದ್ವೀಪ. ನೋಡುತ್ತ ನಿಂತರೆ ಅಲ್ಲೇ ಕಳೆದು ಹೋಗುವುದಂತೂ ಖಂಡಿತ. ಅಲ್ಲಿಯ ತನಕ ಕೇವಲ ಹೆಸರಿನ ರೂಪದಲ್ಲಿ ಕಿವಿಗೆ ಬಿದ್ದಿದ್ದ ಆ ಪ್ರದೇಶ ಈಗ ಕಣ್ಮುಂದೆ ತೆರೆದುಕೊಳ್ಳುವ ಸಮಯ ಬಂದಿತ್ತು. ಅದೆಷ್ಟೋ ಅದ್ಭುತವಾದ ಸ್ಥಳಗಳು ನಮ್ಮ ಸುತ್ತಮುತ್ತ ಇದ್ದರೂ ಕೂಡ ನಾವು ಆ ಸ್ಥಳಗಳಿಗೆ ಭೇಟಿ ನೀಡಿರುವುದಿಲ್ಲ. ಅಂತಹ ಸ್ಥಳಗಳು ಅದೆಷ್ಟೋ ಇವೆ. ಅವುಗಳಲ್ಲಿ ಸೈಂಟ್‌ಮೇರಿಸ್‌ ಕೂಡ ಒಂದು. 

Advertisement

ಸುಮಾರು ನಾಲ್ಕೈದು ವರ್ಷಗಳೇ ಕಳೆದಿತ್ತು ನಾನು ಸಮುದ್ರದ ಕಡೆ ಭೇಟಿ ನೀಡದೆ. ಸ್ವಲ್ಪ ಸಮಯ ಅಲ್ಲೇ ಕಳೆದು ನಂತರ ಮಲ್ಪೆಯಲ್ಲಿ ಬೋಟ್‌ ಹತ್ತಿ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಬೋಟ್‌ನಲ್ಲಿ ಅನೇಕ ಜನರು ನಮ್ಮಂತೆ ಸೈಂಟ್‌ಮೇರೀಸ್‌ ದ್ವೀಪವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಅಂತೂ-ಇಂತೂ ಬೋಟ್‌ ಸಮುದ್ರ ಮಾರ್ಗದಲ್ಲಿ ಚಲಿಸಿ ಸೈಂಟ್‌ಮೇರಿಸ್‌ ದ್ವೀಪದ ದಡದಲ್ಲಿ ಬಂದು ನಿಂತಿತು. ಆ ದ್ವೀಪದ ತುಂಬೆಲ್ಲ ತೆಂಗಿನ ಮರಗಳು ಇರುವುದರಿಂದ ಅದನ್ನು ಕೊಕೊನೆಟ್‌ ಐಲ್ಯಾಂಡ್‌ ಅಂತಲೂ ಕರೆಯುತ್ತಾರಂತೆ. ದ್ವೀಪವನ್ನು ಪ್ರವೇಶಿಸಿದೊಡನೆ ಕಾಣಸಿಗುವ ತೆಂಗಿನ ಮರದಿಂದ ನಿರ್ಮಿತವಾದ ಪ್ರವೇಶದ್ವಾರ  ಜನರನ್ನು ಆಕರ್ಷಿಸುತ್ತದೆ. ಆ ಸಮುದ್ರದ ದಡದಲ್ಲಿ ಅದೆಷ್ಟೋ ವಿಭಿನ್ನವಾದ, ವಿವಿಧ ಆಕೃತಿಯ ಕಪ್ಪೆಚಿಪ್ಪುಗಳು, ಬಂಡೆಗಳಲ್ಲಿನ ಆಕೃತಿಗಳು ಹಾಗೂ ಅಲ್ಲಿ  ಕಛಿಚcಛಿ ಎಂದು ಬರೆದಿರುವ ಫ‌ಲಕ ಜನರನ್ನು ತನ್ನತ್ತ ಸೆಳೆಯುತ್ತದೆ. ನಾವೂ ಅದರತ್ತ ಹೋಗಿ ಒಂದೆರಡು ಫೊಟೋ ಕ್ಲಿಕ್ಕಿಸಿಕೊಂಡಿದ್ದೆವು. ಸಾಗರವು ಪ್ರಶಾಂತವಾಗಿರುವುದರಿಂದ ಹೆಚ್ಚಿನ ಜನ ಇಲ್ಲಿಗೆ ನೆಮ್ಮದಿಯಿಂದ ಕಾಲ ಕಳೆಯಲು ಬಂದು ಹೋಗುತ್ತಾರೆ. 

ಭಾವನಾ ಜೈನ್‌, ಆಳ್ವಾಸ್‌ ಕಾಲೇಜು, ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next