Advertisement

ಯುರೋಪ್‌ನಲ್ಲಿ ಇಸ್ಲಾಂನ ಶರಿಯಾ ಕಾನೂನಿಗೆ ಜಾಗವಿಲ್ಲ: ಇಟಲಿ ಪ್ರಧಾನಿ ವೀಡಿಯೋ ವೈರಲ್‌

12:40 AM Dec 19, 2023 | Team Udayavani |

ರೋಮ್‌: ಶರಿಯಾ ಕಾನೂನು ಎಂದರೆ ಬರೀ ವ್ಯಭಿಚಾರ, ಧರ್ಮಭ್ರಷ್ಟ ಹಾಗೂ ಸಲಿಂಗಕಾಮಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದು ಮಾತ್ರ! ಅಂಥ ಕಾನೂನನ್ನು ಇಟಲಿಯಲ್ಲಿ ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿಕೆ ನೀಡಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಯುರೋಪಿನಲ್ಲಿ ಇಸ್ಲಾಮೀಕರಣದ ಬೆಳವಣಿಗೆ ಬಗ್ಗೆ ಆಕ್ಷೇಪಿಸಿರುವ ಅವರು “ಇಟಲಿಯ ಬಹುತೇಕ ಇಸ್ಲಾಮಿಕ್‌ ಕೇಂದ್ರಗಳಿಗೆ ಸೌದಿ ಅರೇಬಿಯಾ ಅನುದಾನ ನೀಡುತ್ತಿದೆ. ಶರಿಯಾದಂಥ ಕಾನೂನುಗಳ ನ್ನು ಸೌದಿ ರಾಷ್ಟ್ರಗಳು ಅನುಸರಿಸುತ್ತಿವೆ. ಶರಿಯಾ ಅಂದರೆ ಮತ್ತೇನಲ್ಲ, ಬರೀ ವ್ಯಭಿಚಾರ, ಧರ್ಮಭ್ರಷ್ಟ ಹಾಗೂ ಸಲಿಂಗಕಾಮಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದು. ಇಂಥ ನೀತಿ ಅನುಸರಿಸುವ ಇಸ್ಲಾಮಿಗೂ, ಯುರೋಪಿನ ನಾಗರಿಕ ಮೌಲ್ಯಗಳು, ಹಕ್ಕುಗಳಿಗೂ ಹೊಂದಾಣಿಕೆಯ ಸಮಸ್ಯೆ ಇದೆ. ಹಾಗಾಗಿ ಇಂಥ ಕಾನೂನು ಜಾರಿಗೆ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ. ಆದರೆ ಅವರ ಈ ವೀಡಿಯೋ ಯಾವಾಗಿನದ್ದು ಎಂಬುದು ಬಹಿರಂಗಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next