Advertisement

ಕುಂಭ ಮೇಳದಲ್ಲಿ ಒಂಟಿ ತೋಳದ ದಾಳಿ:ಐಸಿಸ್‌ ಆಡಿಯೋ  

10:16 AM Nov 15, 2017 | |

ಹೊಸದಿಲ್ಲಿ: ಕುಂಭ ಮೇಳ ಮತು ತ್ರಿಶೂರ್‌ ಪೂರಂ ವಾರ್ಷಿಕ ಜಾತ್ರೆಯ ವೇಳೆ ಲಾಸ್‌ ವೇಗಾಸ್‌ನಲ್ಲಿ ನಡೆದ ಒಂಟಿ ತೋಳ ಮಾದರಿಯ ಭೀಕರ ದಾಳಿ ನಡೆಸುವುದಾಗಿ ಐಸಿಸ್‌ ಉಗ್ರ ಸಂಘಟನೆಯ ಆಡಿಯೋವೊಂದು ಬಿಡುಗಡೆಯಾಗಿ ಭೀತಿ ಮೂಡಿಸಿದೆ.

Advertisement

10 ನಿಮಿಷದ ಆಡಿಯೋ ಮಲಯಾಳಂ ಭಾಷೆಯಲ್ಲಿದ್ದು , ಪುರುಷನ ಧ್ವನಿಯಲ್ಲಿ ಖುರಾನ್‌ನ ಕೆಲ ವಿಚಾರಗಳನ್ನು ಉಲ್ಲೇಖ ಮಾಡಿ ಭೀಕರ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ. 

ಐಸಿಸ್‌ ಬೆಂಬಲಿಸುವ ದೌಲಾತ್‌ ಇಸ್ಲಾಂ ಸಂಘಟನೆ ಈ ಆಡಿಯೋ ಬಿಡುಗಡೆ ಮಾಡಿದೆ  ಎಂದು ಶಂಕಿಸಲಾಗಿದ್ದು, ಈಗಾಗಲೇ ಇಂತಹ 50 ಕ್ಕೂ ಆಡಿಯೋಗಳು ಬಿಡುಗಡೆಯಾಗಿವೆ ಎಂದು ತಿಳಿದು ಬಂದಿದೆ. 

ಈ ಆಡಿಯೋವನ್ನು ಟೆಲಿಗ್ರಾಂ ಮೆಸೆಂಜರ್‌ನಿಂದ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆಡಿಯೋದಲ್ಲಿ ನಿಮ್ಮ ಬುದ್ಧಿ ಶಕ್ತಿ ಉಪಯೋಗಿಸಿ,ಕುಂಭ ಮೇಳ ಮತ್ತು ತ್ರಿಶೂರ್‌ ಪೂರಂ ನಲ್ಲಿ ಭಕ್ತರ  ಆಹಾರದಲ್ಲಿ ವಿಷ ಹಾಕಿ. ಟ್ರಕ್‌ಗಳನ್ನು ಬಳಸಿ ಜನರ ಮೈಮೇಲೆ ಹರಿಸಿ. ಐಎಸ್‌ ಮುಜಾಹಿದ್ದೀನ್‌ಗಳು ಇದನ್ನು ವಿಶ್ವದೆಲ್ಲೆಡೆ ಮಾಡುತ್ತಿದ್ದಾರೆ. ಲಾಸ್‌ ವೇಗಾಸ್‌ನಲ್ಲೂ ಇಂತಹ ದಾಳಿ ನಡೆದಿದೆ ಎಂದಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ. 

Advertisement

ಕೇರಳ ರಾಜ್ಯದ 100ಕ್ಕೂ ಹೆಚ್ಚು ಜನರು ಐಸಿಸ್‌ ಸೇರಿರುವುದಾಗಿ  ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next