Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರ ಹೇಳಿಕೆ ಒಪ್ಪುವುದಿಲ್ಲ. ಘಟನೆ ನಡೆಯದಿದ್ದರೆ ಸಿಎಂ ಯಾಕೆ ಅಲ್ಲಿಗೆ ಹೋದರು? ಮಕ್ಕಳಿಂದ ತಪ್ಪೊಪ್ಪಿಗೆ ಪತ್ರ ಬರೆಸಿದ್ದಾರೆ ಅಂದ ಮೇಲೆ ತಪ್ಪು ಮಾಡಿದ್ದಾರೆ ಎಂದಲ್ಲವೆ ಎಂದು ದೂರಿದರು.
ತಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇದೊಂದು ಪೂರ್ವಯೋಜಿತ ಕೊಲೆ. ಇದರಲ್ಲಿ ವೈಯಕ್ತಿಕ ಕಾರಣ ಏನಿಲ್ಲ. ಹಿಂದೂ ವಿರೋಧಿಗಳು ಈ ಕೊಲೆ ಮಾಡಿದ್ದಾರೆ. ಹನುಮ ಜಯಂತಿಯೇ ಈ ಕೊಲೆಗೆ ಕಾರಣ ಎಂದು ಹೇಳಿದರು.
Related Articles
Advertisement
ಮುಸ್ಲಿಮರಿಗೆ ಕಾಮಗಾರಿ ನೀಡಿರುವುದು ತಪ್ಪು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರತಿಕ್ರಿಯಿಸಿ, ಗರ್ಭ ಗುಡಿಯ ಕಾಮಗಾರಿಯನ್ನು ಮುಸ್ಲಿಮರಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲ. ದೇವಸ್ಥಾನಗಳನ್ನು ಭಗ್ನ ಮಾಡಿದವರಿಗೆ, ಗೋ ಮಾತೆಯನ್ನು ಭಕ್ಷಣೆ ಮಾಡುವವರಿಗೆ ಕಾಮಗಾರಿ ಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
500 ವರ್ಷ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಆದರೆ, ಗರ್ಭಗುಡಿ ಕಾಮಗಾರಿ ಮುಸ್ಲಿಮರಿಗೆ ನೀಡಲಾಗಿದೆ. ಇದು ಅಕ್ಷಮ್ಯ ಅಪರಾಧ, ಬಹುದೊಡ್ಡ ತಪ್ಪು. ಇದರಿಂದ ಆ ಸ್ಥಳ ಅಪವಿತ್ರವಾಗಿದೆ. ಅಲ್ಲಾ ಒಬ್ಬನೇ ದೇವರು ಎನ್ನುವವರಿಗೆ ಗುತ್ತಿಗೆ ನೀಡಬಾರದಿತ್ತು. ಕೂಡಲೇ ಗುತ್ತಿಗೆ ರದ್ದು ಮಾಡಬೇಕು. ಎಲ್ಲಾ ಮುಸ್ಲಿಂ ಕಾರ್ಮಿಕರನ್ನು ಅಲ್ಲಿಂದ ಹೊರ ಹಾಕಿ ಆ ಸ್ಥಳದ ಪಾವಿತ್ರ್ಯತೆ ಕಾಪಾಡಬೇಕು. ಈ ಬಗ್ಗೆ ಟ್ರಸ್ಟಿಗಳಾಗಿರುವ ಉಡುಪಿ ಪೇಜಾವರ ಮಠದ ಶ್ರೀಗಳಿಗೆ ಮನವಿ ಮಾಡಲಾಗಿದೆ ಎಂದರು.
ಜ್ಞಾನವಾಪಿ ಮಸೀದಿ ವಿವಾದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ಸ್ವಾಗತಿಸುತ್ತೇನೆ. ಒಬ್ಬ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಸರಿಯಾಗಿ ಹೇಳಿದ್ದಾರೆ. ನೂರು ಕೋಟಿ ಭಾರತೀಯರು ಅವರೊಂದಿಗೆ ಇರುತ್ತೇವೆ. ದೇಶದ ಮುಸ್ಲಿಮರು ಸೌಜನ್ಯದಿಂದ ನಡೆದುಕೊಳ್ಳಬೇಕು. ಉದ್ದಟತನದ ವರ್ತನೆ ತೋರಬಾರದು. ಕಾಶಿ ವಿಶ್ವನಾಥ ದೇಗುಲವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಡಿ.6ರ ಘಟನೆ ಮರುಕಳಿಸುವಂತೆ ಮಾಡಬೇಡಿ. ಹಿಂದೂಗಳನ್ನು ಕೆರಳಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದರು.