Advertisement

ಇಸ್ಲಾಮಿಕ್‌ ಬ್ಯಾಂಕಿಂಗ್‌ಗೆ  ಅನುಮತಿ ಇಲ್ಲ: ಆರ್‌ಬಿಐ 

06:30 AM Nov 13, 2017 | Harsha Rao |

ಹೊಸದಿಲ್ಲಿ: ದೇಶದಲ್ಲಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಪದ್ಧತಿ ಅನುಮೋದನೆ ನೀಡದೇ ಇರಲು ನಿರ್ಧರಿಸಲಾಗಿದೆ. ಹೀಗೆಂದು ಮಾಹಿತಿ ಹಕ್ಕಿನ ಅನ್ವಯ ಕೇಳಲಾಗಿದ್ದ ಅರ್ಜಿಗೆ ಆರ್‌ಬಿಐ ಉತ್ತರಿಸಿದೆ. ದೇಶದಲ್ಲಿ ಎಲ್ಲಾ ನಾಗರಿಕರಿಗೆ ಸಮಾನವಾಗಿ ಬ್ಯಾಂಕಿಂಗ್‌ ಚಟುವಟಿಕೆ ನಡೆಸಲು ಅವಕಾಶ ಉಂಟು. ಹೀಗಾಗಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆ ಆರಂಭಕ್ಕೆ ಕೇಂದ್ರ ಸರಕಾರ ಮತ್ತು ಆರ್‌ಬಿಐ ಮುಂದೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಅದಕ್ಕೆ ಅನುಮೋದನೆ ನೀಡದಿರಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.  ಇಸ್ಲಾಮಿಕ್‌ ವ್ಯವಸ್ಥೆಯಲ್ಲಿನ ಹಣಕಾಸು ಪದ್ಧತಿಯಲ್ಲಿರುವ  ಕ್ಲಿಷ್ಟ ಮತ್ತು ಹಲವು ನಿಯಂತ್ರಣಾ ಕ್ರಮಗಳಿಂದಾಗಿ  ಅದರ ಅನುಷ್ಠಾನ ಕಷ್ಟ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next