Advertisement

ಐಎಸ್‌ಎಲ್‌: ಇಂದು ಬೆಂಗಳೂರಿಗೆ ಗೋವಾ ಸವಾಲು

06:30 AM Feb 09, 2018 | Team Udayavani |

ಬೆಂಗಳೂರು: ಸತತ ನಾಲ್ಕು ಗೆಲುವುಗಳ ಆತ್ಮವಿಶ್ವಾಸದ ಅಲೆಯಲ್ಲಿರುವ ಸುನೀಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌)ನಲ್ಲಿ ಶುಕ್ರವಾರ ಗೋವಾ ಎಫ್ಸಿ ತಂಡವನ್ನು ಎದುರಿಸಲಿದೆ.

Advertisement

ಬೆಂಗಳೂರಿನ ಶ್ರೀಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ಎಫ್ಸಿ ತಂಡ ಕೊನೆಯದಾಗಿ ಚೆನ್ನೈಯನ್‌ ತಂಡಕ್ಕೆ ಶಾಕ್‌ ನೀಡಿತ್ತು. ಒಟ್ಟಾರೆ ಅಲ್ಬರ್ಟ್‌ ರೊಕಾ ಕೋಚಿಂಗ್‌ ಹೊಂದಿರುವ ಬೆಂಗಳೂರು ತಂಡ 14 ಪಂದ್ಯದಿಂದ 30 ಅಂಕ ಪಡೆದುಕೊಂಡಿದೆ. 12 ಪಂದ್ಯ ಆಡಿರುವ ಗೋವಾ 20 ಅಂಕಗಳಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next