Advertisement

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

12:45 AM Jan 06, 2025 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಇಸ್ಕಾನ್‌ ದೇಗುಲದ ಸಿಬಂದಿಯೊಬ್ಬ ಭಕ್ತರು ದೇಗುಲಕ್ಕೆ ದೇಣಿಗೆ ನೀಡಿದ್ದ ಲಕ್ಷಾಂತರ ರೂ. ಕದ್ದು ಪರಾರಿಯಾಗಿ ದ್ದಾರೆ ಎಂದು ಆರೋಪಿಸಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಮ ದಾಸ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಕೃತ್ಯವೆಸಗಿರುವ ಸಿಬಂದಿಯನ್ನು ಮುರುಳೀಧರ್‌ ದಾಸ್‌ ಎಂದು ಗುರುತಿಸಲಾಗಿದೆ.

ಭಕ್ತರಿಂದ ದೇಣಿಗೆ ಪಡೆದು, ಅದನ್ನು ಜಮೆ ಮಾಡುವ ಜವಾಬ್ದಾರಿಯನ್ನು ಆತನಿಗೇ ವಹಿಸಲಾಗಿತ್ತು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next