Advertisement

ಇಸ್ಕಾನ್‌ನ ಗೋವರ್ಧನ ಇಕೋ ವಿಲೇಜ್‌ಗೆ ಪುರಸ್ಕಾರ

12:52 PM Oct 19, 2017 | Team Udayavani |

ಥಾಣೆ: ಇಸ್ಕಾನ್‌ ಸಂಸ್ಥೆಯು ಪಾಲ್ಘರ್‌ ಜಿಲ್ಲೆಯಲ್ಲಿ ರೂಪಿಸಿರುವ ಗೋವರ್ಧನ್‌ ಇಕೋ ವಿಲೇಜ್‌ “ಗ್ರೀನ್‌ ಪ್ಲಾಟಿನಮ್‌ ವಿಲೇಜ್‌’ ಪ್ರಶಸ್ತಿ ಗಳಿಸಿದೆ.

Advertisement

ನಿರ್ದೇಶಕ ಗೌರಾಂಗ್‌ ದಾಸ್‌ ಜೈಪುರದಲ್ಲಿ ನಡೆದ ಸಿಐಐ ಪ್ರವರ್ತಿತ ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ನ (ಐಜಿಬಿಸಿ) ಭಾರತೀಯ ಕೈಗಾರಿಕೆಗಳ ಮಹಾಧಿವೇಶನದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಗೋವರ್ಧನ ಇಕೋ ವಿಲೇಜ್‌ ಸ್ವಾವಲಂಬನೆ ಸಾಧಿಸಿರುವ ರೈತರ ಸಮುದಾಯವಾಗಿದೆ. ದೇಶವನ್ನು ಹೆಚ್ಚು ಹಸಿರಾಗಿಸಲು ಹಾಗೂ ಗ್ರಾಮೀಣ ಭಾರತದ ಅಭಿ ವೃದ್ಧಿಗೆ ನಾವು ಪ್ರಯತ್ನ ಮುಂದುವರಿಸಲಿದ್ದೇವೆ. ಈ ಪ್ರಶಸ್ತಿ ಉತ್ತೇಜನಕಾರಿ ಎಂದು ಗ್ರಾಮದ ಸಹ- ಸಂಸ್ಥಾಪಕ ರಾಧಾನಾಥ ಸ್ವಾಮಿ ಮಹಾರಾಜ್‌ ತಿಳಿಸಿದರು.

ವಾಡಾ ತಾಲೂಕಿನ 100 ಎಕರೆ ಪ್ರದೇಶದಲ್ಲಿ ಗೋವರ್ಧನ ಇಕೋ ವಿಲೇಜ್‌ 2003 ಸ್ಥಾಪನೆಯಾಗಿದೆ. ಸಾವಯವ ಕೃಷಿ, ದೇಶೀ ಹಸುಗಳ ಸಂರಕ್ಷಣೆ ಹಾಗೂ ಸಂವರ್ಧನೆ, ಗ್ರಾಮೀಣ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹಾಗೂ ಸುಸ್ಥಿರ ಜೀವನದ ನಿಟ್ಟಿನಲ್ಲಿ ನಿರಂತರ ಶ್ರಮಶೀಲವಾಗಿದೆ ಎಂದು ದಾಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next