Advertisement

ಐಸಿಸ್‌ ನಂಟು ಶಂಕೆ: ಮದ್ರಸ ಶಿಕ್ಷಕ ವಶಕ್ಕೆ

12:30 AM Jan 18, 2019 | Team Udayavani |

ಹೊಸದಿಲ್ಲಿ: ಐಸಿಸ್‌ ಪ್ರೇರಿತ ಉಗ್ರ ಸಂಘಟನೆಯ ಜತೆ ನಂಟು ಹೊಂದಿರುವ ಶಂಕೆಯಲ್ಲಿ ಪಂಜಾಬ್‌ನ ಲೂಧಿಯಾನಾದಿಂದ ಮದ್ರಸ ಶಿಕ್ಷಕರೊಬ್ಬರನ್ನು ಎನ್‌ಐಎ ಗುರುವಾರ ವಶಕ್ಕೆ ಪಡೆದಿದೆ. ಅಲ್ಲದೆ, ಇದೇ ಪ್ರಕರಣ ಸಂಬಂಧ ಉತ್ತರಪ್ರದೇಶ ಮತ್ತು ಪಂಜಾಬ್‌ನ 8 ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಕೈಗೊಂಡಿದೆ.

Advertisement

ಗುರುವಾರ ಮುಂಜಾನೆ ಲೂಧಿಯಾನಾದ ಮಸೀದಿಗೆ ಆಗಮಿಸಿದ ಎನ್‌ಐಎ ತಂಡವು, ಇಲ್ಲಿ ಶಿಕ್ಷಕರಾಗಿ ಹಾಗೂ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೊಹಮ್ಮದ್‌ ಒವೈಸ್‌(20) ಎಂಬವರನ್ನು ವಶಕ್ಕೆ ಪಡೆಯಿತು. ಒವೈಸ್‌ ಉತ್ತರಪ್ರದೇಶದ ರಾಮ್‌ಪುರದವರಾಗಿದ್ದು, ತಿಂಗಳ ಹಿಂದಷ್ಟೇ ಲೂಧಿಯಾನಾಗೆ ಆಗಮಿಸಿ ಮದ್ರಸದಲ್ಲಿ ಕೆಲಸ ಶುರು ಮಾಡಿದ್ದರು ಎಂದು ಟಿಬ್ಟಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಜಮೀಲ್‌ ತಿಳಿಸಿದ್ದಾರೆ.

ರಾಜಕಾರಣಿಗಳು ಹಾಗೂ ಸರಕಾರಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಐಸಿಸ್‌ ಪ್ರೇರಿತ ಉಗ್ರ ಸಂಘಟನೆಯೊಂದರ ಸದಸ್ಯರನ್ನು ಕಳೆದ ಡಿಸೆಂಬರ್‌ನಲ್ಲೇ ಬಂಧಿಸಿದ್ದ ಎನ್‌ಐಎ, ಅನಂತರದ ದಿನಗಳಲ್ಲಿ ಹಲವು ಕಡೆ ಶೋಧ ಕಾರ್ಯ ನಡೆಸಿದೆ. ಈ ಪ್ರಕರಣ ಸಂಬಂಧ ಕಳೆದ ವರ್ಷದ ಡಿ.16ರಿಂದ ಈವರೆಗೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next