Advertisement

ಭಾರತದ ಮೇಲೆ ದಾಳಿಗೆ ಐಸಿಸ್‌ ಉಗ್ರರ ಬೆದರಿಕೆ

01:26 AM May 02, 2019 | Team Udayavani |

ಹೊಸದಿಲ್ಲಿ: ಶ್ರೀಲಂಕಾದಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ಭಾರತ ಮತ್ತು ಬಾಂಗ್ಲಾದೇಶದಲ್ಲಿ ದಾಳಿ ನಡೆಸುವ ಬೆದರಿಕೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಒಡ್ಡಿದೆ. ನೀವು ನಮ್ಮನ್ನು ಹತ್ತಿಕ್ಕಿದ್ದೀರಿ ಎಂದು ಭಾವಿಸಿ ದರೆ, ಅದು ತಪ್ಪು, ನಮ್ಮನ್ನು ಎಂದಿಗೂ ಸುಮ್ಮನಿರಿಸಲಾಗದು. ಸೇಡು ತೀರಿಸಿ ಕೊಳ್ಳುವ ಹಪಾಹಪಿ ಎಂದಿಗೂ ಮುಗಿಯುವುದಿಲ್ಲ ಎಂದು ಸಂಘಟನೆ ಬೆದ ರಿಕೆ ಒಡ್ಡಿದೆ.

Advertisement

ಇದೇ ವೇಳೆ, ಐಸಿಸ್‌ನ ಅಂಗಸಂಸ್ಥೆ ಮುರ್ಸಲತ್‌ಗೆ ಅಬು ಮೊಹಮ್ಮದ್‌ ಅಲ್‌ ಬೆಂಗಾಲಿ ಎಂಬಾತನನ್ನು ಮುಖ್ಯಸ್ಥನನ್ನಾಗಿಯೂ ಘೋಷಿಸಲಾಗಿದೆ.

ಎಚ್ಚರಿಕೆಯನ್ನು ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ ಬಾಂಗ್ಲಾದೇಶ ಅಥವಾ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಯುವ ಸಾಧ್ಯತೆಯಿದೆ. ಸೋಮವಾರವಷ್ಟೇ ಢಾಕಾದಲ್ಲಿ ಗುಲಿಸ್ತಾನ್‌ ಸಿನಿಮಾ ಥಿಯೇಟರ್‌ ಬಳಿ ಸಣ್ಣ ಪ್ರಮಾಣದ ಸ್ಫೋಟ ನಡೆದಿರುವುದು ಇನ್ನಷ್ಟು ಆತಂಕ ಹುಟ್ಟಿಸಿದೆ. ಘಟನೆಯಲ್ಲಿ ಕೆಲವು ಪೊಲೀಸರಿಗೆ ಗಾಯವಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಆದರೆ ಇದು ಕೇವಲ ಪ್ರಾಯೋಗಿಕ ಸ್ಫೋಟ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next